ಮುಂಬೈ: ಐಪಿಎಲ್ 2022 ರಲ್ಲಿ ಕಿಂಗ್ಸ್ ಪಂಜಾಬ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪರಸ್ಪರ ಮುಖಾಮುಖಿಯಾಗಲಿದೆ.
ಕಳೆದ ಎರಡು ಪಂದ್ಯಗಳಿಂದ ಕಿಂಗ್ಸ್ ಪಂಜಾಬ್ ಸೋಲುಂಡಿದ್ದು, ಇದೀಗ ಗೆಲುವಿನ ಬ್ರೇಕ್ ಗಾಗಿ ಕಾಯುತ್ತಿದೆ. ಇದರಿಂದಾಗಿ 7 ಪಂದ್ಯಗಳಿಂದ ಕೇವಲ 3 ಗೆಲುವು ಕಂಡಿದೆ.
ಚೆನ್ನೈ ಸೂಪರ್ ಕಿಂಗ್ಸ್ ಕಳೆದ ಎರಡು ಪಂದ್ಯಗಳಲ್ಲಿ ತೋರಿದ ನಿರ್ವಹಣೆಯಿಂದ ಎರಡು ಗೆಲುವು ಕಂಡಿದೆ. ಹೀಗಾಗಿ ಮತ್ತೆ ಕೂಟದಲ್ಲಿ ಜೀವಂತವಾಗಿರಲು ಸಿಎಸ್ ಕೆಗೆ ಗೆಲುವು ಅನಿವಾರ್ಯ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.