Publish Date: Mon, 25 Apr 2022 (09:10 IST)
Updated Date: Mon, 25 Apr 2022 (09:11 IST)
ಮುಂಬೈ: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧವೂ ಸೋತು ಈ ಐಪಿಎಲ್ ನಲ್ಲಿ 8 ನೇ ಸೋಲು ಕಂಡ ಮುಂಬೈ ಇಂಡಿಯನ್ಸ್ ಇದೀಗ ಹೆಚ್ಚು ಕಡಿಮೆ ಈ ಕೂಟದಿಂದ ಹೊರಬಿದ್ದಿದೆ.
ನಿನ್ನೆಯ ಪಂದ್ಯದಲ್ಲೂ ಮುಂಬೈ ಕಳಪೆ ಬ್ಯಾಟಿಂಗ್ ನಿಂದಾಗಿ ತಂಡ ಸೋಲುವಂತಾಯಿತು. ಹೀಗಾಗಿ ಪಂದ್ಯದ ಬಳಿಕ ರೋಹಿತ್ ಬ್ಯಾಟಿಗರ ಮೇಲೆ ಕೆಂಡಾಮಂಡಲರಾಗಿದ್ದರು.
ಪಂದ್ಯದ ಬಳಿಕ ಮಾತನಾಡಿದ ರೋಹಿತ್ ಇಡೀ ಟೂರ್ನಿಯಲ್ಲಿ ಬ್ಯಾಟಿಗರು ಯಾವತ್ತೂ ತಂಡದ ನೆರವಿಗೇ ಬರಲಿಲ್ಲ. ಇಂತಹ ಮೊತ್ತ ಚೇಸ್ ಮಾಡುವಾಗ ಉತ್ತಮ ಸಹಭಾಗಿತ್ವ ಬೇಕು. ಆದರೆ ನನ್ನ ಸೇರಿದಂತೆ ಎಲ್ಲರೂ ಬೇಜವಾಬ್ಧಾರಿಯುತ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಚೆಲ್ಲಿದರು. ನಾವು ಹೀಗೆ ಮಾಡಬಾರದಿತ್ತು ಎಂದು ಕಿಡಿ ಕಾರಿದ್ದಾರೆ. ಆಡಿದ ಎಲ್ಲಾ ಪಂದ್ಯಗಳನ್ನು ಸೋತಿರುವ ಮುಂಬೈಗೆ ಇನ್ನು ಮುಂದಿನ ಹಾದಿ ಕಷ್ಟ. ಹೀಗಾಗಿ ಹೆಚ್ಚು ಕಡಿಮೆ ಈ ಕೂಟದಿಂದ ಹೊರಬಿದ್ದಂತಾಗಿದೆ.