Publish Date: Sun, 01 May 2022 (09:10 IST)
Updated Date: Sun, 01 May 2022 (09:12 IST)
ಮುಂಬೈ: ಐಪಿಎಲ್ 2022 ರಲ್ಲಿ ನಿನ್ನೆಯ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಫಾರ್ಮ್ ಗೆ ಮರಳಿದ ವಿರಾಟ್ ಕೊಹ್ಲಿಗೆ ಪತ್ನಿ ಅನುಷ್ಕಾ ಶರ್ಮಾ ಲಕ್ಕಿಯಂತೆ.
ಹೀಗಂತ ನೆಟ್ಟಿಗರು ಹೊಗಳಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಕೊಹ್ಲಿ ಇನಿಂಗ್ಸ್ ವೇಳೆ ಅನುಷ್ಕಾ ಮೈದಾನದಲ್ಲಿದ್ದು, ಪತಿಗೆ ಚಿಯರ್ ಅಪ್ ಮಾಡುತ್ತಿದ್ದರು.
ಹೀಗಾಗಿ ಕೊಹ್ಲಿ ಅರ್ಧಶತಕ ಸಿಡಿಸಿದ್ದಕ್ಕೆ ಅನುಷ್ಕಾ ಅದೃಷ್ಟವೇ ಕಾರಣ ಎಂದು ನೆಟ್ಟಿಗರು ಹೊಗಳಿದ್ದಾರೆ. ಕೊಹ್ಲಿ ಅರ್ಧಶತಕ ಸಿಡಿಸಿದಾಗ ಅನುಷ್ಕಾ ಎದ್ದು ನಿಂತು ಚಪ್ಪಾಳೆ ತಟ್ಟಿದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.