Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಮತ್ತೆ ಗೆಲ್ಲದ ಮುಂಬೈ, ಪಂಜಾಬ್ ಗೆ ರೋಚಕ ಜಯ

ಐಪಿಎಲ್ 2022: ಮತ್ತೆ ಗೆಲ್ಲದ ಮುಂಬೈ, ಪಂಜಾಬ್ ಗೆ ರೋಚಕ ಜಯ
ಮುಂಬೈ , ಗುರುವಾರ, 14 ಏಪ್ರಿಲ್ 2022 (08:45 IST)
ಮುಂಬೈ: ಐಪಿಎಲ್ 2022 ರಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿದ್ದ ಮುಂಬೈ ಇಂಡಿಯನ್ಸ್ ಗೆ ಮತ್ತೆ ನಿರಾಸೆಯಾಗಿದೆ. ಸತತ ಐದನೇ ಪಂದ್ಯವನ್ನೂ ಸೋತಿದೆ.

ಕಿಂಗ್ಸ್ ಪಂಜಾಬ್ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ಮುಂಬೈ 12 ರನ್ ಗಳ ಸೋಲು ಅನುಭವಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತು. ಶಿಖರ್ ಧವನ್ 70 ರನ್ ಸಿಡಿಸಿದರು.

ಈ ಮೊತ್ತ ಬೆನ್ನತ್ತಿದ ಮುಂಬೈ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಲಷ್ಟೇ ಶಕ್ತವಾಯಿತು. ರೋಹಿತ್ ಶರ್ಮಾ 28, ಡಿವಾಲ್ಡ್ ಬ್ರೆವಿಸ್ 49, ತಿಲಕ್ ವರ್ಮ 36, ಸೂರ್ಯಕುಮಾರ್ ಯಾದವ್ 43 ರನ್ ಗಳಿಸಿದರು. ಇದರೊಂದಿಗೆ ರೋಹಿತ್ ಪಡೆ ಮತ್ತೊಂದು ಸೋಲು ಅನುಭವಿಸಿತು.

Share this Story:

Follow Webdunia kannada

ಮುಂದಿನ ಸುದ್ದಿ

ಉಳಿದವರು ಲಸ್ಸಿ ಕುಡಿಯಕ್ಕೆ ಹೋಗಿದ್ರಾ? ಧೋನಿಗೆ ಟಾಂಗ್ ಕೊಟ್ಟ ಹರ್ಭಜನ್