Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಡೆಲ್ಲಿ ಗೆಲ್ಲಿಸಿದ ಮಾರ್ಷ್, ಶ್ರಾದ್ಧೂಲ್ ಠಾಕೂರ್

ಐಪಿಎಲ್ 2022: ಡೆಲ್ಲಿ ಗೆಲ್ಲಿಸಿದ ಮಾರ್ಷ್, ಶ್ರಾದ್ಧೂಲ್ ಠಾಕೂರ್
ಮುಂಬೈ , ಮಂಗಳವಾರ, 17 ಮೇ 2022 (08:30 IST)
ಮುಂಬೈ: ಐಪಿಎಲ್ 2022 ರಲ್ಲಿ ಕಿಂಗ್ಸ್ ಪಂಜಾಬ್ ವಿರುದ್ಧದ ಪಂದ್ಯವನ್ನು ರೋಚಕವಾಗಿ 17 ರನ್ ಗಳಿಂದ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಟಾಪ್ ನಾಲ್ಕರೊಳಗೆ ಸ್ಥಾನ ಪಡೆದಿದೆ.

ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಸರ್ಫರಾಜ್ ಖಾನ್ 32, ಮಿಚೆಲ್ ಮಾರ್ಷ್ 63, ಲಲಿತ್ ಯಾದವ್ 24 ರನ್ ಗಳಿಸಿದರು. ಡೇವಿಡ್ ವಾರ್ನರ್ ಗೋಲ್ಡನ್ ಡಕ್ ಔಟಾದರು.

ಈ ಸುಲಭ ಮೊತ್ತವನ್ನು ಡೆಲ್ಲಿ ಬೆನ್ನಟ್ಟಬಹುದು ಎಂಬುದೇ ಎಲ್ಲರ ಲೆಕ್ಕಾಚಾರವಾಗಿತ್ತು. ಮಧ್ಯಮ ಕ್ರಮಾಂಕ ಕೈಕೊಟ್ಟಿದ್ದು ತಂಡಕ್ಕೆ ಪೆಟ್ಟು ನೀಡಿತು. ಜಾನಿ ಬೇರ್ ಸ್ಟೋ 28, ಶಿಖರ್ ಧವನ್ 19, ಜಿತೇಶ್ ಶರ್ಮಾ 44, ರಾಹುಲ್ ಚಹರ್ 25 ರನ್ ಗಳಿಸಿದರು. ಮಾರಕ ದಾಳಿ ಸಂಘಟಿಸಿದ ಶ್ರಾದ್ಧೂಲ್ ಠಾಕೂರ್ 4 ವಿಕೆಟ್, ಕುಲದೀಪ್ ಯಾದವ್, ಅಕ್ಸರ್ ಪಟೇಲ್ ತಲಾ 2 ವಿಕೆಟ್ ತಮ್ಮದಾಗಿಸಿಕೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

ಕೊಹ್ಲಿ, ರೋಹಿತ್ ಫಾರ್ಮ್ ಕಳೆದುಕೊಂಡಿದ್ದಕ್ಕೆ ಚಿಂತೆಯಿಲ್ಲ ಎಂದ ಗಂಗೂಲಿ