Publish Date: Mon, 16 May 2022 (08:10 IST)
Updated Date: Mon, 16 May 2022 (08:16 IST)
ಚೆನ್ನೈ: ಐಪಿಎಲ್ ನಲ್ಲಿ ಧೋನಿ ಇನ್ನು ಎಷ್ಟು ಸಮಯ ಆಡುತ್ತಾರೋ ಗೊತ್ತಿಲ್ಲ. ಈ ಆವೃತ್ತಿಗೆ ಮುನ್ನ ನಾಯಕತ್ವ ತ್ಯಜಿಸಿಯೂ ಇದ್ದರು. ಆದರೆ ಜಡೇಜಾ ವಿಫಲರಾಗಿದ್ದರಿಂದ ಮತ್ತೆ ಧೋನಿಯೇ ನಾಯಕರಾಗಬೇಕಾಯಿತು.
ಹಾಗಿದ್ದರೆ ಧೋನಿ ಬಳಿಕ ಸಿಎಸ್ ಕೆಗೆ ನಾಯಕರೇ ಇಲ್ಲವೇ ಎಂಬ ಪ್ರಶ್ನೆಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಉತ್ತರ ನೀಡಿದ್ದಾರೆ.
ಸದ್ಯಕ್ಕೆ ಸಿಎಸ್ ಕೆ ಪರ ಬ್ಯಾಟಿಂಗ್ ಆಧಾರ ಸ್ತಂಬವಾಗಿರುವ ಋತುರಾಜ್ ಗಾಯಕ್ ವಾಡ್ ಮುಂದೆ ಸಿಎಸ್ ಕೆಯ ಸುದೀರ್ಘ ಅವಧಿಯ ನಾಯಕನಾಗಬಹುದು ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.