Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಸಿಎಸ್ ಕೆಗೆ ದೊಡ್ಡ ಅಂತರದ ಗೆಲುವು

ಐಪಿಎಲ್ 2022: ಸಿಎಸ್ ಕೆಗೆ ದೊಡ್ಡ ಅಂತರದ ಗೆಲುವು
ಮುಂಬೈ , ಸೋಮವಾರ, 9 ಮೇ 2022 (08:30 IST)
ಮುಂಬೈ: ಐಪಿಎಲ್ 2022 ರಲ್ಲಿ ಸೋಲಿನ ಸರಪಳಿಯಿಂದ ಹೊರಬಂದ ಚೆನ್ನೈ ಸೂಪರ್ ಕಿಂಗ್ಸ್ ಮತ್ತೊಂದು ಜಯ ಗಳಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯವನ್ನು 91 ರನ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ ಕೆ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತು. ಋತುರಾಜ್ ಗಾಯಕ್ ವಾಡ್ 41, ಕಾನ್ವೇ 87, ಶಿವಂ ದುಬೆ 32 ರನ್ ಗಳಿಸಿದರು. ಧೋನಿ ಕೇವಲ 8 ಎಸೆತಗಳಲ್ಲಿ ಅಜೇಯ 21 ರನ್ ಸಿಡಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಡೆಲ್ಲಿಗೆ ಬ್ಯಾಟಿಂಗ್ ಕೈ ಕೊಟ್ಟಿತು. ಡೇವಿಡ್ ವಾರ್ನರ್ 19, ಮಿಚೆಲ್ ಮಾರ್ಷ್ 25, ರಿಷಬ್ ಪಂತ್ 21 ರನ್, ಶ್ರಾದ್ಧೂಲ್ ಠಾಕೂರ್ 24 ರನ್ ಗಳಿಸಿದರು. ಆದರೆ ಯಾರೂ ದೊಡ್ಡ ಮೊತ್ತ ಗಳಿಸಲೇ ಇಲ್ಲ. ಇದರಿಂದಾಗಿ ಡೆಲ್ಲಿ 17.4 ಓವರ್ ಗಳಲ್ಲಿ 117 ರನ್ ಗಳಿಗೆ ಆಲೌಟ್ ಆಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022: ಹೈದರಾಬಾದ್ ವಿರುದ್ಧ ಸೇಡು ತೀರಿಸಿಕೊಂಡ ಆರ್ ಸಿಬಿ