Publish Date: Sun, 08 May 2022 (18:33 IST)
Updated Date: Sun, 08 May 2022 (18:35 IST)
ಮುಂಬೈ: ಐಪಿಎಲ್ 2022 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಆರ್ ಸಿಬಿ ಬ್ಯಾಟಿಗ ದಿನೇಶ್ ಕಾರ್ತಿಕ್ ಸ್ಪೋಟಕ ಬ್ಯಾಟಿಂಗ್ ನಡೆಸಿದ್ದಾರೆ.
ಕೇವಲ 8 ಎಸೆತಗಳನ್ನು ಎದುರಿಸಿದ ಕಾರ್ತಿಕ್ 4 ಭರ್ಜರಿ ಸಿಕ್ಸರ್ ಗಳ ನೆರವಿನಿಂದ 30 ರನ್ ಬಾಚಿದರು. ಇದರೊಂದಿಗೆ ಐಪಿಎಲ್ ನಲ್ಲಿ ಗರಿಷ್ಠ ಸ್ಟ್ರೈಕ್ ರೇಟ್ ಹೊಂದಿದ ದಾಖಲೆ ಮಾಡಿದರು.
ಈ ಇನಿಂಗ್ಸ್ ನಲ್ಲಿ ಕಾರ್ತಿಕ್ ಸ್ಟ್ರೈಕ್ ರೇಟ್ 375.0 ಇತ್ತು. ಇದಕ್ಕೂ ಮೊದಲು ರೈನಾ 348.0 ಸ್ಟ್ರೈಕ್ ರೇಟ್ ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರು. ಕಾರ್ತಿಕ್ ಸ್ಪೋಟಕ ಬ್ಯಾಟಿಂಗ್ ನಿಂದಾಗಿ ಆರ್ ಸಿಬಿ ಎದುರಾಳಿಗಳಿಗೆ ಗೆಲ್ಲಲು 193 ರನ್ ಗಳ ಬೃಹತ್ ಮೊತ್ತ ನೀಡಿದೆ.
Krishnaveni K
Publish Date: Sun, 08 May 2022 (18:33 IST)
Updated Date: Sun, 08 May 2022 (18:35 IST)