ಮುಂಬೈ: ಕೊರೋನಾದಿಂದಾಗಿ ಅರ್ಧಕ್ಕೇ ನಿಂತಿದ್ದ ಐಪಿಎಲ್ 14 ರ ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ನಿಗದಿಗೊಳಿಸಿದೆ.
ಯುಎಇನಲ್ಲಿ ಉಳಿದ ಪಂದ್ಯಗಳು ನಡೆಯಲಿದ್ದು, ಸೆಪ್ಟೆಂಬರ್ 19 ರಿಂದ ಕೂಟ ಪುನರಾರಂಭವಾಗಲಿದೆ. ಅಕ್ಟೋಬರ್ 15 ಕ್ಕೆ ಫೈನಲ್ ಪಂದ್ಯ ನಡೆಯಲಿದೆ. ಒಟ್ಟು 25 ದಿನಗಳ ಅವಧಿಯಲ್ಲಿ ಎಲ್ಲಾ ಪಂದ್ಯಗಳನ್ನು ಆಯೋಜಿಸಲಾಗುತ್ತದೆ.
ಒಟ್ಟು ಮೂರು ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ. ಆಟಗಾರರ ಬಿಗುವಿನ ವೇಳಾಪಟ್ಟಿಯನ್ನು ಗಮನಿಸಿ ಎಚ್ಚರಿಕೆಯಿಂದ ವೇಳಾಪಟ್ಟಿ ತಯಾರಿಸಲಾಗಿದೆ.