Publish Date: Sat, 05 Jun 2021 (09:28 IST)
Updated Date: Sat, 05 Jun 2021 (09:29 IST)
ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಆಡಲು ಸೌಥಾಂಪ್ಟನ್ ಗೆ ಬಂದಿಳಿದಿರುವ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಕಠಿಣ ಕ್ವಾರಂಟೈನ್ ನಿಯಮ ಎದುರಾಗಿದೆ.
ಮೂರು ದಿನಗಳ ಕಾಲ ಟೀಂ ಇಂಡಿಯಾ ಕ್ರಿಕೆಟಿಗರು ಒಬ್ಬರ ಮುಖ ಒಬ್ಬರು ನೋಡುವಂತಿಲ್ಲ. ಅಕ್ಷರಶಃ ಏಕಾಂತ ವಾಸ ಅನುಭವಿಸಬೇಕಾಗಿದೆ.
ಇಲ್ಲಿನ ನಿಯಮಗಳ ಪ್ರಕಾರ ಕ್ರಿಕೆಟಿಗರು ಕಠಿಣ ಕ್ವಾರಂಟೈನ್ ಗೊಳಗಾಗಬೇಕಿದೆ. ಇದಾದ ಬಳಿಕವಷ್ಟೇ ಅಭ್ಯಾಸಕ್ಕೆ ಅವಕಾಶ ಸಿಗಲಿದೆ. ಜೂನ್ 18 ರಿಂದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಆರಂಭವಾಗಲಿದೆ.