Select Your Language

Notifications

webdunia
webdunia
webdunia
webdunia

ಐಪಿಎಲ್ ತಯಾರಿಗೆ ದುಬೈನಲ್ಲಿ ಸೌರವ್ ಗಂಗೂಲಿ

ಐಪಿಎಲ್ ತಯಾರಿಗೆ ದುಬೈನಲ್ಲಿ ಸೌರವ್ ಗಂಗೂಲಿ
ದುಬೈ , ಭಾನುವಾರ, 6 ಜೂನ್ 2021 (09:17 IST)
ದುಬೈ: ಐಪಿಎಲ್ 14 ರ ಉಳಿದ ಪಂದ್ಯಗಳನ್ನು ಯುಎಇನಲ್ಲಿ ಆಯೋಜಿಸಲು ಬಿಸಿಸಿಐ ತೀರ್ಮಾನಿಸಿದೆ. ಇದರ ತಯಾರಿಗಾಗಿ ಈಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ದುಬೈನಲ್ಲಿದ್ದಾರೆ.


ಸೆಪ್ಟೆಂಬರ್ ಮೂರನೇ ವಾರದಿಂದ ಐಪಿಎಲ್ ನ ಉಳಿದ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಇದಕ್ಕೆ ಯುಎಇ ಕ್ರಿಕೆಟ್ ಮಂಡಳಿ ಕೂಡಾ ಒಪ್ಪಿದೆ. ಅದಕ್ಕೆ ತಕ್ಕ ತಯಾರಿಯನ್ನೂ ನಡೆಸುತ್ತಿದೆ.

ಇದರ ಮಧ್ಯೆ ಗಂಗೂಲಿ ದುಬೈನಲ್ಲಿ ಬೀಡುಬಿಟ್ಟಿದ್ದು, ಐಪಿಎಲ್ ಸಿದ್ಧತೆಗಳ ಬಗ್ಗೆ ಅವಲೋಕನ ನಡೆಸುತ್ತಿದ್ದಾರೆ. 25 ಪಂದ್ಯಗಳನ್ನು ಮೂರು ಮೈದಾನಗಳಲ್ಲಿ ಆಯೋಜಿಸಿ ಐಪಿಎಲ್ 14 ಕ್ಕೆ ತೆರೆ ಎಳೆದು ಸಂಭಾವ್ಯ ಆರ್ಥಿಕ ನಷ್ಟವನ್ನೂ ತಪ್ಪಿಸುವ ಯತ್ನ ಬಿಸಿಸಿಐದ್ದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂಗ್ಲೆಂಡ್ ನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಒಬ್ಬರ ಮುಖ ಇನ್ನೊಬ್ಬರು ನೋಡುವಂತಿಲ್ಲ!