Publish Date: Mon, 17 May 2021 (10:22 IST)
Updated Date: Mon, 17 May 2021 (10:24 IST)
ಸಿಡ್ನಿ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ರದ್ದಾದ ಬಳಿಕ ತವರಿಗೆ ತೆರಳುವ ಚಿಂತೆಯಲ್ಲಿದ್ದ ಆಸ್ಟ್ರೇಲಿಯಾ ಮೂಲದ ಕ್ರಿಕೆಟಿಗರು ಕೊನೆಗೂ ತಾಯ್ನಾಡು ತಲುಪಿದ್ದಾರೆ.
ಐಪಿಎಲ್ 14 ರದ್ದಾದ ಬೆನ್ನಲ್ಲೇ ಬಿಸಿಸಿಐ ಮತ್ತು ಆಯಾ ಫ‍್ರಾಂಚೈಸಿ ವಿಶೇಷ ವಿಮಾನ ಮೂಲಕ ಕ್ರಿಕೆಟಿಗರನ್ನು ಮಾಲ್ಡೀವ್ಸ್ ಗೆ ರವಾನಿಸಿತ್ತು. ಅಲ್ಲಿ ಎರಡು ವಾರ ಕ್ವಾರಂಟೈನ್ ನಲ್ಲಿ ಕಳೆದ ಆಸ್ಟ್ರೇಲಿಯಾ ಕ್ರಿಕೆಟಿಗರು ಇದೀಗ ಸಿಡ್ನಿಗೆ ಬಂದಿಳಿದಿದ್ದಾರೆ.
ಭಾರತದಿಂದ ಬರುವ ಪ್ರಯಾಣಿಕರಿಗೆ ಆಸ್ಟ್ರೇಲಿಯಾ ಕೊರೋನಾ ಸೋಂಕು ತೀವ್ರತೆ ಹಿನ್ನಲೆಯಲ್ಲಿ ನಿರ್ಬಂಧ ವಿಧಿಸಿತ್ತು. ಹೀಗಾಗಿ ನೇರವಾಗಿ ಭಾರತದಿಂದ ತವರಿಗೆ ಹೋಗಲಾಗದೇ ಆಸೀಸ್ ಕ್ರಿಕೆಟಿಗರನ್ನು ಮಾಲ್ಡೀವ್ಸ್ ಗೆ ಕಳುಹಿಸಲಾಗಿತ್ತು.