Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾದಲ್ಲಿ ಅವಕಾಶ ಸಿಗದ ಬೇಸರ ಹೊರಹಾಕಿದ ಕುಲದೀಪ್ ಯಾದವ್

ಟೀಂ ಇಂಡಿಯಾದಲ್ಲಿ ಅವಕಾಶ ಸಿಗದ ಬೇಸರ ಹೊರಹಾಕಿದ ಕುಲದೀಪ್ ಯಾದವ್
ಮುಂಬೈ , ಸೋಮವಾರ, 7 ಜೂನ್ 2021 (09:20 IST)
ಮುಂಬೈ: ಧೋನಿ ನಾಯಕರಾಗಿದ್ದಾಗ ಟೀಂ ಇಂಡಿಯಾದ ಟ್ರಂಪ್ ಕಾರ್ಡ್ ಆಗಿದ್ದ ಸ್ಪಿನ್ನರ್ ಕುಲದೀಪ್ ಯಾದವ್ ಈಗ ತಂಡದಲ್ಲಿ ಸ್ಥಾನ ಪಡೆಯಲು ಹೆಣಗಾಡುತ್ತಿದ್ದಾರೆ.


ಇಂಗ್ಲೆಂಡ್ ನಲ್ಲಿ ನಡೆಯಲಿರುವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಮತ್ತು ಟೆಸ್ಟ್ ಸರಣಿಗೆ ಕುಲದೀಪ್ ಯಾದವ್ ತಂಡದಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಈ ಬಗ್ಗೆ ಅವರೀಗ ಬೇಸರ ಹೊರಹಾಕಿದ್ದಾರೆ.

‘ಭಾರತೀಯ ತಂಡದಲ್ಲಿ ಅವಕಾಶ ಸಿಗದಿರುವುದು ಬೇಸರ ತಂದಿದೆ. ಪ್ರತಿಬಾರಿಯೂ ತಂಡದಲ್ಲಿ ಅವಕಾಶ ಸಿಕ್ಕಾಗ ಗೆಲುವಿಗಾಗಿ ಶ್ರಮಿಸುತ್ತಿದ್ದೆ. ಇದೆಲ್ಲಾ ವೃತ್ತಿಜೀವನದ ಭಾಗ. ಮುಂದಿನ ಬಾರಿ ಅವಕಾಶ ಸಿಕ್ಕಾಗ ಸರಿಯಾಗಿ ಬಳಸಿಕೊಳ್ಳಬೇಕು. ಶ್ರೀಲಂಕಾ ಸರಣಿಯಲ್ಲಿ ನನಗೆ ಆ ಅವಕಾಶ ಸಿಗಬಹುದು ಎಂಬ ಭರವಸೆಯಿದೆ’ ಎಂದು ಕುಲದೀಪ್ ಯಾದವ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂಗ್ಲೆಂಡ್ ಸರಣಿಯಲ್ಲಿ ಹೊಸ ದಾಖಲೆ ಬರೆಯಲಿರುವ ವೇಗಿ ಮೊಹಮ್ಮದ್ ಶಮಿ