Select Your Language

Notifications

webdunia
webdunia
webdunia
webdunia

ಮಾರ್ಚ್ 11 ರಿಂದ ಚೆನ್ನೈನಲ್ಲಿ ಧೋನಿ ಹವಾ

ಮಾರ್ಚ್ 11 ರಿಂದ ಚೆನ್ನೈನಲ್ಲಿ ಧೋನಿ ಹವಾ
ಚೆನ್ನೈ , ಬುಧವಾರ, 3 ಮಾರ್ಚ್ 2021 (09:06 IST)
ಚೆನ್ನೈ: ಈ ವರ್ಷದ ಐಪಿಎಲ್ ಗೆ ಧೋನಿ ತಯಾರಿ ಆರಂಭಿಸಲಿದ್ದಾರೆ. ಮಾರ್ಚ್ 11 ರಿಂದಲೇ ಧೋನಿ ಚೆನ್ನೈ ಕಾಂಪ್ ಸೇರಿಕೊಳ್ಳಲಿದ್ದಾರೆ.


ಏಪ್ರಿಲ್ ಎರಡನೇ ವಾರದಿಂದ ಐಪಿಎಲ್ 14 ಆರಂಭವಾಗುವ ನಿರೀಕ್ಷೆಯಿದೆ. ಇದಕ್ಕಾಗಿ ಒಂದು ತಿಂಗಳ ಮೊದಲಿನಿಂದಲೇ ಧೋನಿ ಅಭ್ಯಾಸ ಆರಂಭಿಸಲಿದ್ದಾರೆ. ಧೋನಿ ಜೊತೆಗೆ ಈ ವರ್ಷ ಸೇರ್ಪಡೆಯಾದ ಕೆಲವು ಹೊಸ ಆಟಗಾರರೂ ಕ್ಯಾಂಪ್ ಸೇರಿಕೊಳ್ಳಲಿದ್ದಾರೆ.

ಧೋನಿ ಇದೀಗ ಐಪಿಎಲ್ ಹೊರತಾಗಿ ಯಾವುದೇ ಕ್ರಿಕೆಟ್ ಪಂದ್ಯಗಳನ್ನಾಡುತ್ತಿಲ್ಲ. ಹೀಗಾಗಿ ಅವರು ಐಪಿಎಲ್ ಗೆ ಮೊದಲೇ ತಯಾರಿ ಆರಂಭಿಸುತ್ತಾರೆ. ಕಳೆದ ವರ್ಷವೂ ಒಂದು ತಿಂಗಳ ಮೊದಲೇ ತರಬೇತಿ ಆರಂಭಿಸಿದ್ದರು. ಆದರೆ ಕೊರೋನಾದಿಂದಾಗಿ ನಿಗದಿತ ಸಮಯಕ್ಕೆ ಐಪಿಎಲ್ ನಡೆದಿರಲಿಲ್ಲ.

ಕಳೆದ ಆವೃತ್ತಿಯಲ್ಲಿ ಸುರೇಶ್ ರೈನಾ ಆಡಿರಲಿಲ್ಲ. ಹಾಗಿದ್ದರೂ ರೈನಾರನ್ನು ಈ ವರ್ಷವೂ ಚೆನ್ನೈ ತಂಡ ಉಳಿಸಿಕೊಂಡಿದೆ. ಹೀಗಾಗಿ ಅವರೂ ಧೋನಿ ಜೊತೆಗೆ ತರಬೇತಿ ಕ್ಯಾಂಪ್ ಗೆ ಸೇರಿಕೊಳ್ಳುವ ಸಾಧ‍್ಯತೆಯಿದೆ. ಇದಾದ ಬಳಿಕ ಒಬ್ಬೊಬ್ಬರೇ ಆಟಗಾರರು ತಂಡವನ್ನು ಕೂಡಿಕೊಳ್ಳುವ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೋಷಿಯಲ್ ಮೀಡಿಯಾದಲ್ಲಿ ಹೊಸ ದಾಖಲೆ ಬರೆದ ವಿರಾಟ್ ಕೊಹ್ಲಿ