Select Your Language

Notifications

webdunia
webdunia
webdunia
webdunia

ಕೊರೋನಾದಿಂದಾಗಿ ಕನಸಿನ ವಿದಾಯ ಕಳೆದುಕೊಂಡ ಧೋನಿ

webdunia
  • facebook
  • twitter
  • whatsapp
share
ಸೋಮವಾರ, 22 ಫೆಬ್ರವರಿ 2021 (09:16 IST)
ಮುಂಬೈ: ಎಲ್ಲಾ ಸರಿ ಹೋಗಿದ್ದರೆ ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಕಳೆದ ವರ್ಷ ನಡೆಯಬೇಕಿದ್ದ ಟಿ20 ವಿಶ್ವಕಪ್ ಕೂಟದಲ್ಲಿ ಟೀಂ ಇಂಡಿಯಾ ಪರ ಆಡಬೇಕಿತ್ತು. ಆ ಕೂಟವಾಡಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರವುಳಿಯುವ ಯೋಜನೆ ಹಾಕಿಕೊಂಡಿದ್ದರು.


ಆದರೆ ಕೊರೋನಾದಿಂದಾಗಿ ಅವರ ಯೋಜನೆಗಳೆಲ್ಲಾ ತಲೆಕೆಳಗಾಗಿತ್ತು. 2019 ರಲ್ಲಿ ಏಕದಿನ ವಿಶ್ವಕಪ್ ನಲ್ಲಿ ಆಘಾತಕಾರಿಯಾಗಿ ಟೀಂ ಇಂಡಿಯಾ ಹೊರಬಿದ್ದ ಬಳಿಕ ಬಹಳ ದಿನಗಳ ಕಾಲ ಧೋನಿ ಕ್ರಿಕೆಟ್ ಆಡಿರಲಿಲ್ಲ. ಹಾಗಿದ್ದರೂ ಅವರು ಅಭ್ಯಾಸ ತಪ್ಪಿಸಿರಲಿಲ್ಲ. ಪ್ರತಿನಿತ್ಯ ಅಭ್ಯಾಸ ಮಾಡುತ್ತಿದ್ದರು. ಸೆಪ್ಟೆಂಬರ್ ನಲ್ಲಿ ಟಿ20 ವಿಶ್ವಕಪ್ ಆಯೋಜನೆಯಾಗಿದ್ದಿದ್ದರೆ ಅವರು ಆ ಟೂರ್ನಿಯಲ್ಲಿ ಕೊನೆಯದಾಗಿ ಭಾರತವನ್ನು ಪ್ರತಿನಿಧಿಸುತ್ತಿದ್ದರು. ನಾವೂ ಅದನ್ನೇ ಆಶಿಸಿದ್ದೆವು. ಆದರೆ ಕೊರೋನಾ ಎಲ್ಲಾ ಯೋಜನೆ ತಲೆಕೆಳಗು ಮಾಡಿತು ಎಂದು ಮಾಜಿ ಆಯ್ಕೆಗಾರ ಸರಣ್ ದೀಪ್ ಸಿಂಗ್ ಹೇಳಿದ್ದಾರೆ.

Share this Story:
  • facebook
  • twitter
  • whatsapp

Follow Webdunia Hindi

ಮುಂದಿನ ಸುದ್ದಿ

webdunia
ಮೊಟೆರಾ ಮೈದಾನದ ಸೌಕರ್ಯಕ್ಕೆ ಕ್ಲೀನ್ ಬೋಲ್ಡ್ ಆದ ಟೀಂ ಇಂಡಿಯಾ ಕ್ರಿಕೆಟಿಗರು