ಇಸ್ಲಾಮಾಬಾದ್: ಇದೇ ವರ್ಷ ನವಂಬರ್ ನಲ್ಲಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ತಮ್ಮ ತಂಡ ಭಾರತಕ್ಕೆ ಪ್ರಯಾಣ ಬೆಳೆಸಬೇಕಾದರೆ ವೀಸಾ ಸಮಸ್ಯೆಯಾಗದು ಎಂದು ಲಿಖಿತ ಭರವಸೆ ಕೊಡಿ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಗ್ರಹಿಸಿದೆ.
ಇದೇ ಮಾರ್ಚ್ ತಿಂಗಳ ಅಂತ್ಯದೊಳಗಾಗಿ ನಮಗೆ ಭಾರತದ ಸರ್ಕಾರದಿಂದ ಭರವಸೆ ಕೊಡಿಸಿ ಎಂದು ಬಿಸಿಸಿಐಗೆ ಪಾಕ್ ಮನವಿ ಮಾಡಿದೆ. ಕೇವಲ ಕ್ರಿಕೆಟಿಗರಿಗೆ ಮಾತ್ರವಲ್ಲ, ಪತ್ರಕರ್ತರು, ಅಭಿಮಾನಿಗಳು ಭಾರತಕ್ಕೆ ಬರಲು ಅವಕಾಶ ಕೊಡಬೇಕು ಎಂದು ಬೇಡಿಕೆಯಿಟ್ಟಿದೆ. ಕೇಂದ್ರ ಸರ್ಕಾರ ಅಂತಿಮವಾಗಿ ಏನು ತೀರ್ಮಾನ ತೆಗೆದುಕೊಳ್ಳುತ್ತದೋ ಕಾದು ನೋಡಬೇಕು.