Select Your Language

Notifications

webdunia
webdunia
webdunia
Monday, 7 April 2025
webdunia

ಸ್ವಜನ ಪಕ್ಷಪಾತ ಆರೋಪ: ಅರ್ಜುನ್ ತೆಂಡುಲ್ಕರ್ ಬೆಂಬಲಕ್ಕೆ ನಿಂತ ಬಾಲಿವುಡ್ ನಟ

ಫರ್ಹಾನ್ ಅಖ್ತರ್
, ಭಾನುವಾರ, 21 ಫೆಬ್ರವರಿ 2021 (09:31 IST)
ಮುಂಬೈ: ಈ ವರ್ಷದ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಪಾಲಾದ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ವಿರುದ್ಧ ನೆಪೊಟಿಸಮ್ (ಸ್ವಜನ ಪಕ್ಷಪಾತ) ಆರೋಪ ಕೇಳಿಬರುತ್ತಿದೆ.


ಹಲವರು ತೆಂಡುಲ್ಕರ್ ಪುತ್ರ ಎಂಬ ಕಾರಣಕ್ಕೆ ಆತನನ್ನು ಆಯ್ಕೆ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಇದೀಗ ಅರ್ಜುನ್ ಬೆಂಬಲಕ್ಕೆ ಬಂದಿರುವ ಬಾಲಿವುಡ್ ನಟ, ನಿರ್ಮಾಪಕ ಫರ್ಹಾನ್ ಅಖ್ತರ್ ಟ್ವೀಟ್ ಮಾಡಿದ್ದು, ‘ಅರ್ಜುನ್ ಹೋಗುವ ಜಿಮ್ ಗೇ ನಾನು ಹೋಗುತ್ತೇನೆ. ಆತ ಎಷ್ಟು ಪರಿಶ್ರಮಪಡುತ್ತಾನೆ, ಕ್ರಿಕೆಟ್ ಗಾಗಿ ಎಷ್ಟು ಶ್ರಮವಹಿಸುತ್ತಿದ್ದಾನೆ ಎಂದು ನಾನು ನೋಡಿದ್ದೇನೆ. ಇನ್ನೂ ಪ್ರವರ್ಧಮಾನಕ್ಕೆ ಬರುತ್ತಿರುವ ಹುಡುಗನ ಉತ್ಸಾಹವನ್ನು ಟೀಕೆಗಳಿಂದ ಕುಗ್ಗಿಸಬೇಡಿ’ ಎಂದು ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಮಗೆ ಲಿಖಿತ ಭರವಸೆ ಕೊಡಿ: ಭಾರತಕ್ಕೆ ಪಾಕ್ ಕ್ರಿಕೆಟ್ ಮಂಡಳಿ ಆಗ್ರಹ