Select Your Language

Notifications

webdunia
webdunia
webdunia
webdunia

ಅರ್ಧದಲ್ಲೇ ಕೈಬಿಟ್ಟು ಹೋಗ್ತಿದ್ದೀಯಲ್ಲಾ ಲಂಬೂ..! ಹೀಗಂತ ಇಶಾಂತ್ ಗೆ ಧೋನಿ ಹೇಳಿದ್ದೇಕೆ?

ಅರ್ಧದಲ್ಲೇ ಕೈಬಿಟ್ಟು ಹೋಗ್ತಿದ್ದೀಯಲ್ಲಾ ಲಂಬೂ..! ಹೀಗಂತ ಇಶಾಂತ್ ಗೆ ಧೋನಿ ಹೇಳಿದ್ದೇಕೆ?
ಮುಂಬೈ , ಬುಧವಾರ, 24 ಫೆಬ್ರವರಿ 2021 (10:14 IST)
ಮುಂಬೈ: ಇಂದು 100 ನೇ ಟೆಸ್ಟ್ ಪಂದ್ಯವಾಡುತ್ತಿರುವ ಇಶಾಂತ್ ಶರ್ಮಾ, ಧೋನಿ ಜೊತೆಗಿನ ಹಳೆಯ ನೆನಪೊಂದನ್ನು ಮೆಲುಕು ಹಾಕಿದ್ದಾರೆ.


ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ನಲ್ಲಿ ಧೋನಿ ಕೊನೆಯ ಪಂದ್ಯವಾಡುವ ದಿನ ಇಶಾಂತ್ ಪಂದ್ಯದ ಮಧ್ಯದಲ್ಲಿ ಮೊಣಕಾಲಿನ ಗಾಯಕ್ಕೊಳಗಾಗಿದ್ದರು. ತೀವ್ರ ನೋವಿದ್ದರೂ ಆಗಾಗ ನೋವು ನಿವಾರಕ ಇಂಜೆಕ್ಷನ್ ಬಳಸಿ ಬೌಲಿಂಗ್ ಮಾಡುತ್ತಿದ್ದರಂತೆ.  ಆದರೆ ಆ ಪಂದ್ಯ ಧೋನಿಯ ಕೊನೆಯ ಪಂದ್ಯವೆಂಬುದು ಯಾರಿಗೂ ಗೊತ್ತಿರಲಿಲ್ಲ. ಇಶಾಂತ್ ನಾಲ್ಕನೇ ದಿನದ ವೇಳೆಗೆ ನೋವು ತಡೆಯಲಾಗದೇ ನನಗಿನ್ನು ಇಂಜಕ್ಷನ್ ತೆಗೆದುಕೊಳ್ಳಲು ಸಾಧ‍್ಯವಿಲ್ಲ ಎಂದರಂತೆ. ಆಗ ಧೋನಿ ನೀನು ಬೌಲಿಂಗ್ ಮಾಡದಿದ್ದರೂ ಪರವಾಗಿಲ್ಲ. ಆದರೆ ನನಗೆ ಅರ್ಧದಲ್ಲೇ ಕೈ ಕೊಟ್ಟು ಹೋಗ್ತಿದ್ದೀಯಲ್ಲಾ ಲಂಬೂ ಎಂದರಂತೆ. ಆಗ ಧೋನಿ ಯಾಕೆ ಹಾಗೆ ಹೇಳಿದರು ಎಂದು ಇಶಾಂತ್ ಗೆ ಅರ್ಥವಾಗಿರಲಿಲ್ಲವಂತೆ. ಆದರೆ ಅದು ಧೋನಿಯ ಕೊನೆಯ ಪಂದ್ಯವಾಗಿತ್ತು ಎಂದು ತಿಳಿದ ಮೇಲೆ ಇದೇ ಕಾರಣಕ್ಕೆ ಅವರು ಮೇಲಿನ ಮಾತು ಹೇಳಿದರು ಎಂದು ಅರ್ಥವಾಗಿ ಬೇಸರವಾಯಿತಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ದಾಖಲೆ ಮುರಿಯಲು ಸಜ್ಜಾದ ಕ್ಯಾಪ್ಟನ್ ಕೊಹ್ಲಿ