Select Your Language

Notifications

webdunia
webdunia
webdunia
webdunia

ಭಾರತ-ಇಂಗ್ಲೆಂಡ್ ಮೂರನೇ ಟೆಸ್ಟ್: ಟೀಂ ಇಂಡಿಯಾದಲ್ಲಿ ಯಾರೆಲ್ಲಾ ಬದಲಾಗಬಹುದು?

ಭಾರತ-ಇಂಗ್ಲೆಂಡ್ ಮೂರನೇ ಟೆಸ್ಟ್: ಟೀಂ ಇಂಡಿಯಾದಲ್ಲಿ ಯಾರೆಲ್ಲಾ ಬದಲಾಗಬಹುದು?
ಅಹಮ್ಮದಾಬಾದ್ , ಮಂಗಳವಾರ, 23 ಫೆಬ್ರವರಿ 2021 (09:15 IST)
ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಾಳೆಯಿಂದ ಹಗಲು ರಾತ್ರಿಯಾಗಿ ಮೂರನೇ ಟೆಸ್ಟ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ತಂಡದಲ್ಲಿ ಕಂಡುಬರಬಹುದಾದ ಬದಲಾವಣೆಗಳೇನು ಎಂದು ನೋಡೋಣ.


ಮೊದಲೆರಡು ಟೆಸ್ಟ್ ಪಂದ್ಯ ಸಂಪೂರ್ಣವಾಗಿ ಸ್ಪಿನ್ನರ್ ಗಳಿಗೆ ಸಹಕಾರಿಯಾಗುವ ಪಿಚ್ ನಲ್ಲಿ ಪಂದ್ಯ ನಡೆದಿತ್ತು. ಹೀಗಾಗಿ ಟೀಂ ಇಂಡಿಯಾ ಸ್ಪಿನ್ನರ್ ಗಳಿಗೆ ಹೆಚ್ಚು ಮಣೆ ಹಾಕಿತ್ತು. ಆದರೆ ಈ ಪಂದ್ಯಕ್ಕೆ ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ತಂಡಕ್ಕೆ ವಾಪಸಾತಿಯಾಗಬಹುದು. ಸುಂದರ್ ತಂಡಕ್ಕೆ ಬಂದರೆ ಕುಲದೀಪ್ ಯಾದವ್ ಹೊರಹೋಗಬಹುದು. ರವಿಚಂದ್ರನ್ ಅಶ್ವಿನ್ ಗೆ ಸ್ಪಿನ್ ಬೌಲಿಂಗ್ ಗೆ ಸುಂದರ್, ಅಕ್ಸರ್ ಪಟೇಲ್ ಸಾಥ್ ಕೊಡಬಹುದು. ಇನ್ನು ಈ ಇಶಾಂತ್- ಬುಮ್ರಾ ಜೋಡಿ ಮತ್ತೆ ವೇಗದ ಬೌಲಿಂಗ್ ಹೊಣೆ ಹೊರಲಿದೆ. ಇದಕ್ಕಾಗಿ ಸಿರಾಜ್ ಹೊರಹೋಗಬೇಕಾದೀತು. ಬ್ಯಾಟ್ಸ್ ಮನ್ ಗಳಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆಯಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ಆಟಗಾರರಿಗೆ ತಕ್ಷಣವೇ ಅಹಮ್ಮದಾಬಾದ್ ನಲ್ಲಿ ಸೇರಲು ಬುಲಾವ್ ನೀಡಿದ ಬಿಸಿಸಿಐ