Publish Date: Tue, 23 Feb 2021 (10:19 IST)
Updated Date: Tue, 23 Feb 2021 (10:20 IST)
ಮುಂಬೈ: ಇಂಗ್ಲೆಂಡ್ ವಿರುದ್ಧ ಅಂತಿಮ ಎರಡು ಟೆಸ್ಟ್ ಪಂದ್ಯಕ್ಕೆ ತಂಡಕ್ಕೆ ಕಮ್ ಬ್ಯಾಕ್ ಮಾಡಿರುವ ವೇಗಿ ಉಮೇಶ್ ಯಾದವ್ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ.
ಆಸ್ಟ್ರೇಲಿಯಾ ಸರಣಿಯಲ್ಲಿ ಉಮೇಶ್ ಗಾಯಗೊಂಡಿದ್ದರು. ಇದೀಗ ಚೇತರಿಸಿಕೊಂಡ ಕಾರಣ ತಂಡಕ್ಕೆ ವಾಪಸಾಗಿದ್ದಾರೆ. ಆದರೆ ತಂಡ ಸೇರಿಕೊಳ್ಳುವ ಮೊದಲು ಉಮೇಶ್ ಫಿಟ್ನೆಸ್ ಪರೀಕ್ಷೆ ಪಾಸಾಗಬೇಕಿತ್ತು. ಇದೀಗ ಪಾಸಾಗಿದ್ದರಿಂದ ಅವರ ಹಾದಿ ಸುಗಮವಾಗಿದೆ.