ಮುಂಬೈ: ಮೊನ್ನೆಯಷ್ಟೇ ಐಪಿಎಲ್ ನಲ್ಲಿ ದುಡಿದ ಹಣದಲ್ಲಿ ತಂದೆಗೆ ಉತ್ತಮ ಚಿಕಿತ್ಸೆ ಕೊಡಿಸುವುದಾಗಿ ಹೇಳಿಕೊಂಡಿದ್ದ ರಾಜಸ್ಥಾನ್ ರಾಯಲ್ಸ್ ಕ್ರಿಕೆಟಿಗ ಚೇತನ್ ಸಕಾರಿಯಾಗೆ ಕೊನೆಗೂ ತಂದೆಯನ್ನು ಉಳಿಸಲಾಗಲೇ ಇಲ್ಲ.
ಚೇತನ್ ಸಕಾರಿಯಾ ತಂದೆಗೆ ಕೊರೋನಾ ಸೋಂಕು ತಗುಲಿತ್ತು. ಈ ಸಂಬಂಧ ಗುಜರಾತ್ ನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಬಡತನದ ಹಿನ್ನಲೆಯಿಂದ ಬಂದಿದ್ದ ಚೇತನ್ ತಮಗೆ ಐಪಿಎಲ್ 14 ರಲ್ಲಿ ಆಡಿದ್ದಕ್ಕೆ ಇದುವರೆಗೆ ಸಿಕ್ಕಿದ್ದ ಭಾಗಶಃ ವೇತನದ ಅಷ್ಟೂ ಭಾಗವನ್ನು ತಂದೆಯ ಚಿಕಿತ್ಸೆಗೆ ನೀಡಿದ್ದರು. ಆದರೆ ಕೊನೆಗೂ ತಮ್ಮ ತಂದೆಯನ್ನು ಉಳಿಸಲಾಗಲೇ ಇಲ್ಲ.