Publish Date: Sun, 09 May 2021 (09:30 IST)
Updated Date: Sun, 09 May 2021 (09:31 IST)
ನವದೆಹಲಿ: ದೇಶವಿಡೀ ಕೊರೋನಾದಿಂದ ಪರಿತಪಿಸುತ್ತಿರುವಾಗ ಕ್ರಿಕೆಟಿಗರೂ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಇದೀಗ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಕೊರೋನಾ ಪರಿಹಾರಕ್ಕೆ ದೇಣಿಗೆ ನೀಡಿದ್ದಾರೆ.
ಕೊರೋನಾ ರೋಗಿಗಳಿಗೆ ಆಕ್ಸಿಜನ್, ವೈದ್ಯಕೀಯ ಉಪಕರಣಗಳು ಹಾಗೂ ಇತರ ಸಹಾಯ ಮಾಡುತ್ತಿರುವ ಫೌಂಡೇಷನ್ ಒಂದಕ್ಕೆ ದೇಣಿಗೆ ನೀಡಿರುವ ರಿಷಬ್ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ.
ಅಷ್ಟೇ ಅಲ್ಲ, ದೇಶದ ಮೂಲೆ ಮೂಲೆಯಲ್ಲೂ ಕೊರೋನಾ ಪರಿಹಾರಕ್ಕಾಗಿ ಕೆಲಸ ಮಾಡುವ ಸಂಘ ಸಂಸ್ಥೆಗಳೊಂದಿಗೆ ಕೆಲಸ ಮಾಡಲು ಸಿದ್ಧರಾಗಿರುವುದಾಗಿ ರಿಷಬ್ ಹೇಳಿಕೊಂಡಿದ್ದಾರೆ. ಅಲ್ಲದೆ, ಕೊರೋನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುವುದಾಗಿಯೂ ಹೇಳಿದ್ದಾರೆ.
Krishnaveni K
Publish Date: Sun, 09 May 2021 (09:30 IST)
Updated Date: Sun, 09 May 2021 (09:31 IST)