Select Your Language

Notifications

webdunia
webdunia
webdunia
webdunia

ಐಪಿಎಲ್ 13ನೇ ಆವೃತ್ತಿ ನಡೆಯೋದು ಅನುಮಾನ ಎಂದ ಗಂಗೂಲಿ

ಐಪಿಎಲ್ 13ನೇ ಆವೃತ್ತಿ ನಡೆಯೋದು ಅನುಮಾನ ಎಂದ ಗಂಗೂಲಿ
ಮುಂಬೈ , ಭಾನುವಾರ, 12 ಏಪ್ರಿಲ್ 2020 (22:31 IST)
ಕೊರೊನಾ ಭೀತಿಯ ನಡುವೆಯೇ ಐಪಿಎಲ್ 13 ನೇ ಆವೃತ್ತಿಯ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಇದಕ್ಕೆ ಬಿಸಿಸಿಐ ಅಧ್ಯಕ್ಷ ಹೇಳಿಕೆ ನೀಡಿದ್ದಾರೆ.

ಲಾಕ್ ಡೌನ್ ಕಾರಣದಿಂದ ಏ.15ಕ್ಕೆ ಮುಂದೂಡಿಕೆ ಮಾಡಲಾಗಿದ್ದ ಐಪಿಎಲ್ ಮತ್ತೊಮ್ಮೆ ಲಾಕ್ ಡೌನ್ ವಿಸ್ತರಣೆ ಮಾಡಿರೋದ್ರಿಂದ ಸಧ್ಯಕ್ಕೆ ನಡೆಯೋದು ಅನುಮಾನವಾಗಿದೆ.

ದೇಶಾದ್ಯಂತ ಲಾಕ್ ಡೌನ್ ಇರೋವಾಗ ಆಟಗಾರರು ಪ್ರಯಾಣ ಮಾಡೋದು ಹೇಗೆ? ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರಶ್ನಿಸಿದ್ದಾರೆ.

ಬಿಸಿಸಿಐ ಪದಾಧಿಕಾರಿಗಳ ಜೊತೆ ಹಾಗೂ ಪ್ರಾಂಚೈಸಿಗಳ ಜೊತೆ ಚರ್ಚೆ ನಡೆಸಿದ ಬಳಿಕವಷ್ಟೇ ಈ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಬಹುದಾಗಿದೆ ಎಂದಿದ್ದಾರೆ.

ಕೊರೊನಾ ಹಾವಳಿ ಹೆಚ್ಚುತ್ತಿರುವುದರಿಂದಾಗಿ ಐಪಿಎಲ್ ನಡೆಯೋದು ಸಧ್ಯಕ್ಕೆ ಅನುಮಾನ ಅಂತ ಗಂಗೂಲಿ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ಇಫೆಕ್ಟ್: ಪಾಕ್ ಕ್ರಿಕೆಟಿಗರ ವೇತನ ಕಟ್