Publish Date: Sun, 12 Apr 2020 (08:58 IST)
Updated Date: Sun, 12 Apr 2020 (08:59 IST)
ಇಸ್ಲಾಮಾಬಾದ್: ಭಾರತೀಯ ಕ್ರಿಕೆಟಿಗರಿಗೆ ಇದುವರೆಗಿನ ವೇತನ ಪಾವತಿ ಮಾಡಿ ಬಿಸಿಸಿಐ ಸುದ್ದಿಗೆ ಗ್ರಾಸವಾಗಿತ್ತು. ಆದರೆ ಪಾಕ್ ಮಾತ್ರ ಕ್ರಿಕೆಟಿಗರ ವೇತನಕ್ಕೆ ಕತ್ತರಿ ಹಾಕಿ ಸುದ್ದಿಯಾಗಿದೆ.
ಕೊರೋನಾದಿಂದಾಗಿ ಆರ್ಥಿಕ ಸಂಕಷ್ಟದಲ್ಲಿದ್ದರೂ ಬಿಸಿಸಿಐ ಆಟಗಾರರ ವೇತನಕ್ಕೆ ಕತ್ತರಿ ಹಾಕಿರಲಿಲ್ಲ. ಆದರೆ ಪಿಸಿಬಿ ಕತೆ ಹಾಗಲ್ಲ. ಮೊದಲೇ ಹಣಕಾಸಿಗೆ ಪರದಾಡುತ್ತಿರುವ ಸಂಸ್ಥೆಗೆ ಈಗ ಕೊರೋನಾದಿಂದಾಗಿ ಮತ್ತಷ್ಟು ಸಂಕಟ ಎದುರಾಗಿದೆ.
ಹೀಗಾಗಿ ತನ್ನ ಗುತ್ತಿಗೆ ಆಧಾರಿತ ಆಟಗಾರರಿಗೆ ವೇತನ ಕಡಿತಗೊಳಿಸಲು ತೀರ್ಮಾನಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಪಾಕ್ ಟೆಸ್ಟ್ ತಂಡದ ನಾಯಕ ಅಝರ್ ಅಲಿ ಇದಕ್ಕೆ ನಾವು ಮೊದಲೇ ಮಾನಸಿಕವಾಗಿ ಸಿದ್ಧರಾಗಿದ್ದೆವು ಎಂದಿದ್ದಾರೆ.