Publish Date: Sun, 15 Nov 2020 (10:34 IST)
Updated Date: Sun, 15 Nov 2020 (10:35 IST)
ನವದೆಹಲಿ: 2020 ರ ಐಪಿಎಲ್ ನಲ್ಲಿ ತನ್ನ ಮೆಚ್ಚಿನ ತಂಡವನ್ನು ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ನೀಡಿದ್ದು, ಈ ತಂಡಕ್ಕೆ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿಯನ್ನು ನಾಯಕನಾಗಿ ಆರಿಸಿದ್ದಾರೆ.
ಈ ಬಾರಿ ಆರ್ ಸಿಬಿ ಪ್ಲೇ ಆಫ್ ಹಂತದಲ್ಲಿ ಮುಗ್ಗರಿಸಿದರೂ ಕಳೆದ ಕೆಲವು ಆವೃತ್ತಿಗೆ ಹೋಲಿಸಿದರೆ ಗಮನಾರ್ಹ ಪ್ರದರ್ಶನ ನೀಡಿತ್ತು. ಹೀಗಾಗಿ ಕೊಹ್ಲಿಯನ್ನು ತನ್ನ ಕನಸಿನ ತಂಡಕ್ಕೆ ನಾಯಕನಾಗಿ ಮಾಡಿದ್ದಾರೆ. ಅವರಲ್ಲದೆ ಸೆಹ್ವಾಗ್ ತಂಡದಲ್ಲಿ ವಿಕೆಟ್ ಕೀಪರ್ ಆಗಿ ಕನ್ನಡಿಗ ಕೆಎಲ್ ರಾಹುಲ್ ಸ್ಥಾನ ಪಡೆದಿದ್ದಾರೆ. ಉಳಿದಂತೆ ಎಬಿಡಿ ವಿಲಿಯರ್ಸ್, ಸೂರ್ಯಕುಮಾರ್ ಯಾದವ್, ದೇವದತ್ತ್ ಪಡಿಕ್ಕಲ್, ಮೊಹಮ್ಮದ್ ಶಮಿ, ಯಜುವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ ಸೇರಿದಂತೆ ಈ ಐಪಿಎಲ್ ನಲ್ಲಿ ಮಿಂಚಿದ ಪ್ರಮುಖ ಆಟಗಾರರು ಸ್ಥಾನ ಪಡೆದಿದ್ದಾರೆ.