Publish Date: Thu, 12 Nov 2020 (09:00 IST)
Updated Date: Thu, 12 Nov 2020 (09:02 IST)
ದುಬೈ: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಟಿ20,ಏಕದಿನ ಮತ್ತು ಟೆಸ್ಟ್ ಸರಣಿ ಆಡಲು ಕಾಂಗಾರೂ ನಾಡಿಗೆ ಪ್ರಯಾಣ ಬೆಳೆಸಿದೆ.
ನಿನ್ನೆ ಯುಎಇನಿಂದ ಭಾರತೀಯ ಕ್ರಿಕೆಟಿಗರು ಆಸ್ಟ್ರೇಲಿಯಾ ವಿಮಾನವೇರಿದ್ದಾರೆ. ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಹಾರ್ದಿಕ್ ಪಾಂಡ್ಯ ಮುಂತಾದ ಕ್ರಿಕೆಟಿಗರು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ವಿಮಾನವೇರುವ ಮುನ್ನ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.