Select Your Language

Notifications

webdunia
webdunia
webdunia
webdunia

ಕಳೆಗುಂದಿದ ಸಿಎಸ್ ಕೆಗೆ ಈ ಸ್ಟಾರ್ ಬ್ಯಾಟ್ಸ್ ಮನ್ ಆಗಮನ?

ಸಿಎಸ್ ಕೆ
ದುಬೈ , ಸೋಮವಾರ, 12 ಅಕ್ಟೋಬರ್ 2020 (10:11 IST)
ದುಬೈ: ಐಪಿಎಲ್ ನಲ್ಲಿ ಯಾಕೋ ಸಿಎಸ್ ಕೆ ತಂಡದ ಅದೃಷ್ಟವೇ ಸರಿಯಿಲ್ಲವೆನಿಸುತ್ತದೆ. ಸತತ ವೈಫಲ್ಯದಿಂದ ಬೇಸತ್ತಿರುವ ತಂಡಕ್ಕೆ ಚೈತನ್ಯ ನೀಡಬಲ್ಲಂತಹ ಐಡಿಯಾವೊಂದನ್ನು ಕ್ರಿಕೆಟ್ ವಿಶ್ಲೇಷಕ ಹರ್ಷ ಭೋಗ್ಲೆ ಹೇಳಿದ್ದಾರೆ.


ಸೊರಗಿರುವ ಸಿಎಸ್ ಕೆ ತಂಡದ ಬ್ಯಾಟಿಂಗ್ ಸುಧಾರಿಸಲು ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿರುವ ಅಜಿಂಕ್ಯಾ ರೆಹಾನೆಯನ್ನು ಕರೆತರಬಹುದು ಎಂದು ಭೋಗ್ಲೆ ಸಲಹೆ ನೀಡಿದ್ದಾರೆ. 2020 ರ ಐಪಿಎಲ್ ಗೆ ಡೆಲ್ಲಿ ತಂಡದ ಪಾಲಾಗಿರುವ ರೆಹಾನೆ ಇದುವರೆಗೆ ಈ ಕೂಟದಲ್ಲಿ ಒಂದೇ ಒಂದು ಪಂದ್ಯವಾಡಿಲ್ಲ. ಹೀಗಾಗಿ ಅವರನ್ನು ಮಿಡ್ ಸೀಸನ್ ಸ್ಕೀಮ್ ಅಡಿಯಲ್ಲಿ ಚೆನ್ನೈ ತಂಡ ತನ್ನ ತಂಡಕ್ಕೆ ಖರೀದಿ ಮಾಡಿಕೊಳ್ಳಬಹುದು ಎಂದು ಭೋಗ್ಲೆ ಐಡಿಯಾ ಕೊಟ್ಟಿದ್ದಾರೆ. ಇಂತಹದ್ದೊಂದು ಪುನಶ್ಚೇತನವಿಲ್ಲದೇ ಚೆನ್ನೈ ಪರಿಸ್ಥಿತಿ ಸುಧಾರಿಸದು ಎನ್ನುವುದು ಅವರ ಅಭಿಪ್ರಾಯ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 13: ಮೈದಾನದಲ್ಲೇ ಅಸ್ಸಾಮಿ ನೃತ್ಯ ಮಾಡಿದ ರಾಜಸ್ಥಾನ್ ಕ್ರಿಕೆಟಿಗ ರಿಯಾಗ್ ಪರಾಗ್