ದುಬೈ: ಐಪಿಎಲ್ 13 ರಲ್ಲಿ ಹೀನಾಯ ಪ್ರದರ್ಶನ ನೀಡುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಗ್ಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕಟು ಟೀಕೆ ಮಾಡಿದ್ದಾರೆ.
ಸಿಎಸ್ ಕೆ ತಂಡದ ಕೆಲವು ಬ್ಯಾಟ್ಸ್ ಮನ್ ಗಳು ಇದನ್ನು ಒಂದು ಸರ್ಕಾರಿ ಕೆಲಸ ಅಂದುಕೊಂಡಿದ್ದಾರೆ. ತಾವು ಪ್ರದರ್ಶನ ನೀಡದೇ ಇದ್ದರೂ ತಮ್ಮ ಜೇಬಿಗೆ ಸಂಬಳ ಗ್ಯಾರಂಟಿ ಎನ್ನುವ ಭಾವನೆಯಲ್ಲಿದ್ದಾರೆ ಎಂದು ಸೆಹ್ವಾಗ್ ಟೀಕಿಸಿದ್ದಾರೆ. ಚೇಸ್ ಮಾಡಬಹುದಾದ ಸ್ಕೋರ್ ಇದ್ದರೂ ವಿಫಲರಾಗುತ್ತಿರುವ ಚೆನ್ನೈ ತಂಡದ ಬ್ಯಾಟ್ಸ್ ಮನ್ ಗಳ ಸ್ಟ್ರಾಟಜಿ ಬಗ್ಗೆ ಸೆಹ್ವಾಗ್ ಕಟುವಾಗಿ ವಿಮರ್ಶಿಸಿದ್ದಾರೆ.