ನ್ಯೂಯಾರ್ಕ್: ಭಾರತದ ಮೇಲೆ ಹೊಟ್ಟೆ ಉರಿ ಪಟ್ಟುಕೊಳ್ಳುತ್ತಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ಸುಂಕದ ಬರೆ ಹಾಕಿದ್ದಾರೆ. ಔಷಧಿಗಳ ಮೇಲೂ ಸುಂಕ ಹಾಕಿದ್ದಾರೆ.
ಅಕ್ಟೋಬರ್ 1 ರಿಂದ ಜಾರಿಯಾಗುವಂತೆ ಅಮೆರಿಕಾಕ್ಕೆ ರಫ್ತಾಗುವ ಔಷಧಿಗಳ ಮೇಲೆ 100% ಟಾರಿಫ್ ಘೋಷಣೆ ಮಾಡಿದ್ದಾರೆ. ಇದು ಔಷದಿಗಳಿಗೆ ಅಮೆರಿಕಾವನ್ನು ಅವಲಂಬಿಸಿರುವ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಿಗೆ ಸಮಸ್ಯೆಯಾಗಲಿದೆ.
ಸೆನ್ಸಸ್ ಬ್ಯೂರೋ ಪ್ರಕಾರ 2024 ರಿಂದ ಅಮೆರಿಕಾಗೆ 233 ಬಿಲಿಯನ್ ಡಾಲರ್ ನಷ್ಟು ಔಷದಿಗಳ ರಫ್ತು ಮಾಡಿತ್ತು. ಇದೀಗ ಅಮೆರಿಕಾ ಪ್ರವೇಶಿಸುವ ಎಲ್ಲಾ ಬ್ರ್ಯಾಂಡೆಡ್ ಮತ್ತು ಪೇಟೆಂಟ್ ಪಡೆದ ಔಷಧಿಗಳು ಶೇ.100 ಸುಂಕಕ್ಕೆ ಒಳಪಡುತ್ತವೆ ಎಂದು ಟ್ರಂಪ್ ಘೋಷಿಸಿದ್ದಾರೆ.
ಒಂದು ವೇಳೆ ಅಮೆರಿಕಾದಲ್ಲಿಯೇ ಈ ಕಂಪನಿಗಳು ಉತ್ಪಾದನಾ ಘಟಕ ಸ್ಥಾಪಿಸಿದರೆ ಅವು ಸುಂಕದಿಂದ ವಿನಾಯಿತಿ ಪಡೆಯಲಿದೆ. ಟ್ರಂಪ್ 100% ಸುಂಕದಿಂದಾಗಿ ಮುಂದಿನ ಆರ್ಥಿಕ ವರ್ಷದಲ್ಲಿ ಔಷಧಿ ಕಂಪನಿಗಳ ಆದಾಯದಲ್ಲಿ ಶೇ.5 ರಿಂದ 10 ರಷ್ಟು ಕುಂಠಿತವಾಗಲಿದೆ.