ನವದೆಹಲಿ: ಅಮೆರಿಕಾದ ಬಲಪಂಥಿಯ ನಾಯಕ ಚಾರ್ಲಿ ಕಿರ್ಕ್‌ನನ್ನು ಮಾರಣಾಂತಿಕವಾಗಿ ಗುಂಡಿಕ್ಕಿ ಹತ್ಯೆಗೈದ ಶಂಕಿತ ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಹೇಳಿದ್ದಾರೆ.
ಫಾಕ್ಸ್ ನ್ಯೂಸ್‌ನೊಂದಿಗೆ ಮಾತನಾಡಿದ ಟ್ರಂಪ್, ಕಾನೂನು ಜಾರಿ ಅಧಿಕಾರಿಗಳು ಶಂಕಿತನನ್ನು ಬಂಧಿಸಿದ್ದಾರೆ ಎಂಬುದಕ್ಕೆ "ಉನ್ನತ ಮಟ್ಟದ ಖಚಿತತೆ" ಇದೆ ಎಂದು ಹೇಳಿದರು.
31 ವರ್ಷದ ಚಾರ್ಲಿ ಕಿರ್ಕ್ ಅವರನ್ನು ಬುಧವಾರ ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಮತ್ತು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಗುಂಡು ಹಾರಿಸಿ ಹತ್ಯೆ ಮಾಡಲಾಯಿತು.
ಹತ್ಯೆಯ ವಿಡಿಯೋ ಮೊಬೈಲ್ ಕ್ಯಾಮಾರದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಭಾರೀ ವೈರಲ್ ಆಯಿತು.
ಕುರ್ಚಿಯಲ್ಲಿ ಕೂತಿದ್ದ ಕಿರ್ಕ್ ಮಾತು ನಿಲ್ಲಿಸಿದ್ದಾಗ ಏಕಾಏಕಿ ಗುಂಡೊಂದು ಆತನ ಕುತ್ತಿಗೆ ಬಂದು ಹೊಕ್ಕಿದೆ. ತೀವ್ರವಾದ ರಕ್ತಸ್ರಾವದಿಂದ ಆಲ್ಲೇ ಕುಸಿದು ಬಿದ್ದಿದ್ದಾನೆ.
ಭಯಭೀತರಾದ ಪ್ರೇಕ್ಷಕರು ಓಡಿಹೋದಾಗ ಕುಸಿದು ಬೀಳುವ ಮೊದಲು ಅವರು ಕುತ್ತಿಗೆಯನ್ನು ಹಿಡಿದಿಟ್ಟುಕೊಳ್ಳುವುದು, ಗಾಯದಿಂದ ರಕ್ತ ಹರಿಯುವುದನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುವ ಕ್ಲಿಪ್‌ಗಳು ತೋರಿಸುತ್ತವೆ.