ಟೆಲ್ ಅವಿವ್: ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ ಯುನೈಟೆಡ್ ಸ್ಟೇಟ್ಸ್ ನಡೆಸಿದ 'ನಿಖರ ದಾಳಿ' ಸಂಬಂದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾನುವಾರ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅಭಿನಂದಿಸಿದ್ದಾರೆ.
ವೀಡಿಯೋ ಸಂದೇಶದಲ್ಲಿ ನೆತನ್ಯಾಹು, "ಅಧ್ಯಕ್ಷ ಟ್ರಂಪ್‌ಗೆ ಅಭಿನಂದನೆಗಳು. ಇರಾನ್‌ನ ಪರಮಾಣು ಕೇಂದ್ರಗಳನ್ನು ಅಮೆರಿಕದ ಅದ್ಭುತ ಮತ್ತು ನೀತಿವಂತ ಶಕ್ತಿಯೊಂದಿಗೆ ಗುರಿಯಾಗಿಸುವ ನಿಮ್ಮ ದಿಟ್ಟ ನಿರ್ಧಾರವು ಇತಿಹಾಸವನ್ನು ಬದಲಾಯಿಸುತ್ತದೆ.
ತಮ್ಮ ನಾಯಕತ್ವವು ಪಶ್ಚಿಮ ಏಷ್ಯಾ ಮತ್ತು ಅದರಾಚೆಗೆ ಸಮೃದ್ಧಿ ಮತ್ತು ಶಾಂತಿಯ ಭವಿಷ್ಯಕ್ಕೆ ಸಹಾಯ ಮಾಡುವ ಇತಿಹಾಸದ ತಿರುವನ್ನು ಸೃಷ್ಟಿಸಿದೆ ಎಂದು ಹೇಳಿದ ನೆತನ್ಯಾಹು ಅವರು ನಿಲುವನ್ನು ಪುನರುಚ್ಚರಿಸಿದರು.
"ಅಧ್ಯಕ್ಷ ಟ್ರಂಪ್ ಮತ್ತು ನಾನು ಆಗಾಗ್ಗೆ ಹೇಳುತ್ತೇವೆ, ಶಕ್ತಿಯ ಮೂಲಕ ಶಾಂತಿ. ಮೊದಲು ಬಲ ಬರುತ್ತದೆ, ನಂತರ ಶಾಂತಿ ಬರುತ್ತದೆ." ಟ್ರಂಪ್‌ಗೆ ಧನ್ಯವಾದ ಅರ್ಪಿಸಿದರು ಮತ್ತು "ದೇವರು ನಮ್ಮ ಅಚಲ ಮೈತ್ರಿಯನ್ನು, ನಮ್ಮ ಮುರಿಯಲಾಗದ ನಂಬಿಕೆಯನ್ನು ಆಶೀರ್ವದಿಸಲಿ" ಎಂದು ಹೇಳಿದರು.