Select Your Language

Notifications

webdunia
webdunia
webdunia
webdunia

ಇಂದು 10 ಗಂಟೆಯಿಂದ ಬೆಂಗಳೂರಿನ ಈ ಏರಿಯಾದಲ್ಲಿ ವಿದ್ಯುತ್ ಇರಲ್ಲ

power cut

Krishnaveni K

ಬೆಂಗಳೂರು , ಶುಕ್ರವಾರ, 26 ಸೆಪ್ಟಂಬರ್ 2025 (08:41 IST)
ಬೆಂಗಳೂರು: ಇಂದು ಬೆಳಿಗ್ಗೆ 10 ಗಂಟೆಯಿಂದ ಬೆಂಗಳೂರಿನ ಈ ಏರಿಯಾದಲ್ಲಿ ವಿದ್ಯುತ್ ಇರುವುದಿಲ್ಲ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. ಯಾವೆಲ್ಲಾ ಏರಿಯಾಗಳು ಇಲ್ಲಿದೆ ವಿವರ.

ತುರ್ತು ಕಾಮಗಾರಿ ನಿಮಿತ್ತ ಇಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಈ ಸಮಯದಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಬೆಸ್ಕಾಂ ಮನವಿ ಮಾಡಿದೆ.

ಯಾವೆಲ್ಲಾ ಏರಿಯಾಗಳಲ್ಲಿ ಇರಲ್ಲ?
ಇಸ್ಕಾನ್ ಉಪಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಮಂತ್ರಿ ಅಪಾರ್ಟ್ ಮೆಂಟ್, ತಲಘಟ್ಟಪುರ, ರಘುವನಹಳ್ಳಿ, ಗುಬ್ಬಲಾಳ, ಕುವೆಂಪುನಗರ, ವಿವಿ ನಗರ, ವಿವಿ ಲೇಔಟ್, ಬಾಲಾಜಿ ಲೇಔಟ್, ರಾಯಲ್ ಫಾರಂ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಈ ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸ ಕಾರ್ಯಗಳನ್ನು ಹೊಂದಾಣಿಕೆ ಮಾಡಿಕೊಳ್ಳಬಹುದು. ಇತ್ತೀಚೆಗಿನ ನವೀಕರಣ ಮತ್ತು ವಿದ್ಯುತ್ ವ್ಯತ್ಯಯದ ಮಾಹಿತಿಗಾಗಿ ಬೆಸ್ಕಾಂ ಅಧಿಕೃತ ವೆಬ್ ಸೈಟ್ ಅಥವಾ ಫೇಸ್ ಬುಕ್ ಪೇಜ್ ಗೆ ಭೇಟಿ ನೀಡಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಇಂದಿನಿಂದ ಕರಾವಳಿ ಸೇರಿ ಈ ಜಿಲ್ಲೆಗಳಿಗೆ ಭಾರೀ ಮಳೆ