ಬೆಂಗಳೂರು: ಇಂದು ಮತ್ತು ನಾಳೆ ಬೆಂಗಳೂರಿನ ಈ ಕೆಲವು ಪ್ರದೇಶಗಳಲ್ಲಿ ಕೆಲವೇ ಕ್ಷಣಗಳಲ್ಲಿ ವಿದ್ಯುತ್ ಕೈ ಕೊಡಲಿದೆ. ಯಾವೆಲ್ಲಾ ಏರಿಯಾ ಇಲ್ಲಿದೆ ವಿವರ.
ಬಾಣಸವಾರಿ 66/11 ಕೆವಿ ಉಪ ಕೇಂದ್ರದಲ್ಲಿ ತುರ್ತು ನಿರ್ವಹಣೆ ಹಿನ್ನಲೆಯಲ್ಲಿ ಇಂದು ಮತ್ತು ನಾಳೆ ಈ ವ್ಯಾಪ್ತಿಯಲ್ಲಿ ಬರುವ ಸ್ಥಳಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ನೀಡಿದೆ.
ಯಾವೆಲ್ಲಾ ಸ್ಥಳಗಳಿಗೆ ಕರೆಂಟ್ ಇರಲ್ಲ?
ಹೊರಮಾವು ಪಿ ಆಂಡ್ ಟಿ ಲೇ ಔಟ್, ನಿಸರ್ಗ ಕಾಲೊನಿ, ನಂದನಂ ಕಾಲೊನಿ, ಆಶೀರ್ವಾದ್ ಕಾಲೊನಿ, ಜ್ಯೋತಿನಗರ, ಅಗರ, ಬಾಲಾಜಿ ಲೈಔಟ್, ಚಿನ್ನಸ್ವಾಮಪ್ಪ ಲೇಔಟ್, ಕೋಕನಟ್ ಗ್ರೋ ಲೇಔಟ್, ದೇವಮಾತ ಶಾಲೆ, ಅಮರ್ ರೀಜೆನ್ಸಿ, ವಿಜಯ ಬ್ಯಾಂಕ್ ಕಾಲೊನಿ, ಎಚ್ ಆರ್ ಬಿಆರ್ ಲೇಔಟ್, ಬಾಬುಸಾಪಾಳ್ಯ, ಕಮ್ಮನಹಳ್ಳಿ ಮುಖ್ಯರಸ್ತೆ, ಕಲ್ಯಾಣ ನಗರ, ಹೆಣ್ಣೂರು ಗ್ರಾಮ, ಚಳ್ಳಕೆರೆ, ಮೇಘನ ಪಾಳ್ಯ, ಗೆದ್ದಲಹಳ್ಳಿ, ಕೊತ್ತನೂರು, ವಡ್ಡರ ಪಾಳ್ಯ, ಜಾನಕೀರಾಮ್ ಲೇಔಟ್, ಬಿಡಿಎಸ್ ಗಾರ್ಡನ್, ಸತ್ಯ ಎನ್ ಕ್ಲೇವ್, ಪ್ರಕೃತಿ ಲೇಔಟ್, ಹೊಯ್ಸಳ ನಗರ, ಬೃಂದಾವನ ಲೇಔಟ್, ವಿನಾಯಕ ಲೇಔಟ್, ವಿವೇಕಾನಂದ ಲೇಔಟ್, ಮಂಜುನಾಥನಗರ ರಸ್ತೆ, ಯಾಸಿನ್ ನಗರ, ಎನ್ ಆರ್ ಐ ಲೇಔಟ್, ಪುಣ್ಯಭೂಮಿ ಲೇಔಟ್, ಸಮದ್ ಲೇಔಟ್, ಕುಳ್ಳಪ್ಪ ಸರ್ಕಲ್, ರಾಜ್ ಕುಮಾರ್ ಪಾರ್ಕ್, ಸಂಗೊಳ್ಳಿ ರಾಯಣ್ಣ ರಸ್ತೆ, ರಾಮಯ್ಯ ಲೇಔಟ್, ದೊಡ್ಡ ಬಾಣಸವಾಡಿ, ರಾಮಮೂರ್ತಿ ನಗರ ಮುಖ್ಯರಸ್ತೆ, ಕೃಷ್ಣಾರೆಡ್ಡಿ ಲೇಔಟ್, ಗೋಪಾಲರೆಡ್ಡಿ ಲೇಔಟ್, ಚಿಕ್ಕ ಬಾಣಸವಾಡಿ, ಸುಬ್ಬಯ್ಯನ ಪಾಳ್ಯ, ಗ್ರೀನ್ ಪಾರ್ಕ್ ಲೇಔಟ್, ಫ್ಲವರ್ ಗಾರ್ಡನ್, ದಿವ್ಯ ಉನ್ನತಿ ಲೇಔಟ್, ಪ್ರಕೃತಿ ಟೌನ್ ಶಿಪ್ ಲೇಔಟ್, ಭೈರತಿ ಬಂಡೆ, ಸಂಗಂ ಎನ್ ಕ್ಲೇವ್, ಅಥಂ ವಿದ್ಯಾನಗರ, ಭೈರತಿ ಹಳ್ಳಿ, ಕನಕಶ್ರೀ ಲೇಔಟ್, ಗುಬ್ಬಿ ಕ್ರಾಸ್, ಬ್ಯಾಂಕ್ ಅವೆನ್ಯೂ ರಸ್ತೆ, ನಂಜಪ್ಪ ಗಾರ್ಡನ್, ಸಿಎನ್ಆರ್ ಲೇಔಟ್, ಆರ್ ಎಸ್ ಪಾಳ್ಯ, ಮುನಿಕಲ್ಲಪ್ಪ ಗಾರ್ಡನ್, ಹನುಮಂತಪ್ಪ ರಸ್ತೆ, ಕಲ್ಕೆರೆ, ಮುನೇಗೌಡರಸ್ತೆ, ಬಂಜಾರ ಲೇಔಟ್, ಸಮೃದ್ಧಿ ಲೇಔಟ್ ಮತ್ತು ಜಯಂತಿ ನಗರ ಸುತ್ತಮುತ್ತಲ ಪ್ರದೇಶಗಳು.