Select Your Language

Notifications

webdunia
webdunia
webdunia
webdunia

ಕುಂಕುಮ ಕಂಡರೆ ಭಯ ಆಗುತ್ತೆ, ಟೋಪಿ ಹಾಕಲು ಖುಷಿಯಾಗುತ್ತಾ: ಸಿದ್ದರಾಮಯ್ಯ ಟ್ರೋಲ್

Siddaramaiah

Krishnaveni K

ಬೆಂಗಳೂರು , ಶನಿವಾರ, 6 ಸೆಪ್ಟಂಬರ್ 2025 (10:05 IST)
Photo Credit: X
ಬೆಂಗಳೂರು: ಅರಮನೆ ಮೈದಾನದಲ್ಲಿ ನಿನ್ನೆ ಮಿಲಾದ್ ಸಮಿತಿ ಆಯೋಜಿಸಿದ್ದ "ಅಂತಾರಾಷ್ಟ್ರೀಯ ಮಿಲಾದುನ್ನಬೀ ಸಮಾವೇಶ"ದಲ್ಲಿ  ಪಾಲ್ಗೊಂಡ ಸಿಎಂ ಸಿದ್ದರಾಮಯ್ಯ ಮುಸ್ಲಿಮರ ಸಾಂಪ್ರದಾಯಿಕ ಟೋಪಿ ಧರಿಸಿದ್ದಕ್ಕೆ ಟ್ರೋಲ್ ಆಗಿದ್ದಾರೆ.

ಅನೇಕ ಮುಸ್ಲಿಂ ಧಾರ್ಮಿಕ ಮುಖಂಡರು, ಸಚಿವ ಜಮೀರ್ ಅಹ್ಮದ್ ಸೇರಿದಂತೆ ಹಲವರು ಭಾಗಿಯಾಗಿದ್ದ ಸಮಾವೇಶವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ವೇದಿಕೆಯಲ್ಲಿದ್ದ ಸಿದ್ದರಾಮಯ್ಯಗೆ ಮುಸ್ಲಿಂ ಮುಖಂಡರು ಸಾಂಪ್ರದಾಯಿಕ ಟೋಪಿ ಮತ್ತು ಶಾಲು ಹೊದೆಸಿದರು.

ಈ ಟೋಪಿ ಧರಿಸಿಕೊಂಡೇ  ಸಿದ್ದರಾಮಯ್ಯ ಭಾಷಣ ಮಾಡಿದರು. ‘ಪರಧರ್ಮ ಸಹಿಷ್ಣುತೆ ಸಂವಿಧಾನದ ಮೂಲ‌ ಆಶಯವಾಗಿದ್ದು ಸಂವಿಧಾನದ ಪಾಲನೆಯೇ ನಮ್ಮೆಲ್ಲರ ಗುರಿಯಾಗಲಿ.

ಪ್ರವಾದಿಯವರ ಬೋಧನೆಗಳು ಮಾನವ ಇತಿಹಾಸದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದವು. ಅವರು ಸಮಸ್ತ ಮಾನವಕೋಟಿಗೆ ನ್ಯಾಯ, ಸಮಾನತೆ ಮತ್ತು ಧಾರ್ಮಿಕ ಸೌಹಾರ್ದದ ಮಾರ್ಗಗಳನ್ನು ತೋರಿಸಿದರು. ಬಸವಣ್ಣನವರ ನೇತೃತ್ವದ ಶರಣ ಚಳವಳಿಯೂ ಕೂಡ ಮಾನವ ಕುಲ ಒಂದೇ ಎನ್ನುವ ಮೌಲ್ಯವನ್ನೇ ಸಾರಿತ್ತು.

ಪ್ರವಾದಿಗಳು ಶಾಂತಿಯ ಧೂತರು. ಇಡೀ ಮಾನವ ಕುಲ ಶಾಂತಿಗಾಗಿ, ಪರಸ್ಪರತೆ, ಸಹೋದರತ್ವಕ್ಕಾಗಿ ಕೆಲಸ ಮಾಡಬೇಕು ಎನ್ನುವುದು ಪ್ರವಾದಿಗಳ ಬೋಧನೆಯಾಗಿದೆ.

ನಮ್ಮ ಸಂವಿಧಾನದ ಮೂಲ ಆಶಯ ಕೂಡ ಭ್ರಾತೃತ್ವ ಮತ್ತು ಪರಧರ್ಮ ಸಹಿಷ್ಣುತೆಯೇ ಆಗಿದೆ. ಆದ್ದರಿಂದ ಸಂವಿಧಾನವನ್ನು ಆಚರಿಸುವುದು, ಪಾಲಿಸುವುದು ನಮ್ಮೆಲ್ಲರ ಗುರಿಯಾಗಲಿ.  ಪ್ರವಾದಿಯವರ ಬೋಧನೆಗಳು ಮಾನವ ಇತಿಹಾಸದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದವು. ಅವರು ಸಮಸ್ತ ಮಾನವಕೋಟಿಗೆ ನ್ಯಾಯ, ಸಮಾನತೆ ಮತ್ತು ಧಾರ್ಮಿಕ ಸೌಹಾರ್ದದ ಮಾರ್ಗಗಳನ್ನು ತೋರಿಸಿದರು. ಬಸವಣ್ಣನವರ ನೇತೃತ್ವದ ಶರಣ ಚಳವಳಿಯೂ ಕೂಡ ಮಾನವ ಕುಲ ಒಂದೇ ಎನ್ನುವ ಮೌಲ್ಯವನ್ನೇ ಸಾರಿತ್ತು. ಪ್ರವಾದಿಗಳು ಶಾಂತಿಯ ಧೂತರು. ಇಡೀ ಮಾನವ ಕುಲ ಶಾಂತಿಗಾಗಿ, ಪರಸ್ಪರತೆ, ಸಹೋದರತ್ವಕ್ಕಾಗಿ ಕೆಲಸ ಮಾಡಬೇಕು ಎನ್ನುವುದು ಪ್ರವಾದಿಗಳ ಬೋಧನೆಯಾಗಿದೆ’ ಎಂದರು.

ಸಿದ್ದರಾಮಯ್ಯ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ಕ್ಷಣದ ಫೋಟೋಗಳನ್ನು ಹಂಚಿಕೊಂಡಿದ್ದು ಇದಕ್ಕೆ ನೆಟ್ಟಿಗರು ವ್ಯಂಗ್ಯ ಮಾಡಿದ್ದಾರೆ. ಕುಂಕುಮ ಹಚ್ಚಿಕೊಳ್ಳಲು, ಕೇಸರಿ ಕಂಡರೆ ಭಯ ಎನ್ನುವ ನೀವು ಮುಸ್ಲಿಂ ಟೋಪಿಯನ್ನು ನಗು ನಗುತ್ತಾ ಹಾಕಿಕೊಂಡಿದ್ದೀರಿ? ಯಾಕೆ ಇದನ್ನು ಕಂಡರೆ ಭಯವಿಲ್ವಾ ಎಂದು ಟಾಂಗ್ ಕೊಟ್ಟಿದ್ದಾರೆ. ಹಾಗಿದ್ರೆ ದಸರಾ ಉದ್ಘಾಟನೆಗೆ ಬರುವ ಬಾನು ಮುಷ್ತಾಕ್ ಗೂ ಕುಂಕು ಹಚ್ಚಿಸಿ ಉದ್ಘಾಟನೆ ಮಾಡಿಸಿ ಎಂದಿದ್ದಾರೆ. ಮುಸ್ಲಿಮರ ಕಾರ್ಯಕ್ರಮದಲ್ಲಿ ಭಾಗಿಯಾದರೆ ಅವರ ಪೋಷಾಕು ಧರಿಸಲೇ ಬೇಕೇ? ಎಂದು ಪ್ರಶ್ನೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಗೆ ತಾಕತ್ತಿದ್ದರೆ ಇವಿಎಂನಿಂದ ಗೆದ್ದಿರುವ ಸರ್ಕಾರ ವಜಾಗೊಳಿಸಿ ಚುನಾವಣೆ ಎದುರಿಸಲಿ: ವಿಜಯೇಂದ್ರ