Publish Date: Sat, 06 Sep 2025 (08:33 IST)
Updated Date: Sat, 06 Sep 2025 (08:38 IST)
ಬೆಂಗಳೂರು: ಈ ವಾರವಿಡೀ ರಾಜ್ಯದಲ್ಲಿ ವಿಪರೀತ ಮಳೆಯ ವಾತಾವರಣವಿತ್ತು. ಇದೀಗ ವಾರಂತ್ಯದಲ್ಲಿ ಮಳೆಯ ಅಬ್ಬರ ಹೇಗಿರಲಿದೆ? ಸೈಕ್ಲೋನ್ ಇಫೆಕ್ಟ್ ಕಡಿಮೆಯಾಗಲಿದೆಯಾ ಇಲ್ಲಿದೆ ವಿವರ.
ಬಂಗಾಳ ಕೊಲ್ಲಿಯಲ್ಲಿ ವಾಯು ಭಾರ ಕುಸಿತದಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇ ಜಿಲ್ಲೆಗಳಲ್ಲಿ ವಾರವಿಡೀ ಭಾರೀ ಮಳೆಯಾಗಿತ್ತು. ನಿನ್ನೆ ಮಾತ್ರ ತಕ್ಕ ಮಟ್ಟಿಗೆ ಮಳೆಯ ಅಬ್ಬರ ಕಡಿಮೆ ಎನ್ನಬಹುದು. ಅದು ಬಿಟ್ಟರೆ ವಾರ ಪೂರ್ತಿ ಮಳೆ, ಮೋಡ ಮುಸುಕಿದ ವಾತಾವರಣವಿತ್ತು.
ಹವಾಮಾನ ವರದಿ ಪ್ರಕಾರ ಇಂದೂ ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆಯಿದೆ. ಬೆಂಗಳೂರಿನಲ್ಲೂ ಇಂದು ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಜಿಲ್ಲೆಗಳಲ್ಲಂತೂ ಇದುವರೆಗೂ ಮಳೆ ಬಿಡುವು ಕೊಟ್ಟಿಲ್ಲ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದೂ ಮಳೆಯಾಗಲಿದೆ. ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ಕೊಡಗು ಜಿಲ್ಲೆಗಳಿಗೂ ಇಂದು ಮಳೆಯ ಸೂಚನೆಯಿದೆ. ಚಾಮರಾಜನಗರ, ತುಮಕೂರು, ಚಿತ್ರದುರ್ಗ, ಹಾವೇರಿ, ಗದಗ, ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ರಾಮಗರ, ಬೆಳಗಾವಿ ಜಿಲ್ಲೆಗಳಲ್ಲಿ ಇಂದು ಮಳೆಯಾಗಲಿದೆ.
ಕೋಲಾರ, ರಾಯಚೂರು, ಕೊಪ್ಪಳ, ಬಳ್ಳಾರಿ, ಯಾದಗಿರಿ ಜಿಲ್ಲೆಗಳಲ್ಲಿ ಇಂದು ಬಿಸಿಲಿನ ವಾತಾವರಣವಿರಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.