Select Your Language

Notifications

webdunia
webdunia
webdunia
webdunia

Donald Trump: 75 ದೇಶಗಳಿಗೆ ವಿನಾಯ್ತಿ ಕೊಟ್ಟು ಚೀನಾಕ್ಕೆ ಮಾತ್ರ 125% ಸುಂಕ ವಿಧಿಸಿರುವುದೇಕೆ ಡೊನಾಲ್ಡ್ ಟ್ರಂಪ್

Donald Trump

Krishnaveni K

ನ್ಯೂಯಾರ್ಕ್ , ಗುರುವಾರ, 10 ಏಪ್ರಿಲ್ 2025 (10:57 IST)
ನ್ಯೂಯಾರ್ಕ್: ವಿದೇಶೀ ಉತ್ಪನ್ನಗಳ ಮೇಲೆ ವಿಧಿಸಿದ ಸುಂಕದ ವಿಚಾರ ಭಾರೀ ಸದ್ದು ಮಾಡುತ್ತಿರುವಾಗಲೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 75 ದೇಶಗಳಿಗೆ 90 ದಿನಗಳ ಬ್ರೇಕ್ ನೀಡಿದ್ದಾರೆ. ಆದರೆ ಚೀನಾ ಮೇಲೆ ಮಾತ್ರ 125% ಸುಂಕ ಮುಂದುವರಿಸಿದ್ದಾರೆ. ಇದಕ್ಕೆ ಕಾರಣವೇನು ನೋಡಿ.

ಡೊನಾಲ್ಡ್ ಟ್ರಂಪ್ ಪ್ರತಿಸುಂಕ ವಿಚಾರ ಈಗ ಹಲವು ದೇಶಗಳನ್ನು ಸಂಕಷ್ಟಕ್ಕೀಡು ಮಾಡಿದೆ. ಟ್ರಂಪ್ ನಿರ್ಧಾರ ಭಾರತದ ಮೇಲೂ ಪರಿಣಾಮ ಬೀರಿದೆ. ಷೇರುಮಾರುಕಟ್ಟೆಗಳ ಮೇಲೂ ಪ್ರಭಾವ ಬೀರುತ್ತಿದೆ.

ಈ ನಡುವೆ 75 ದೇಶಗಳಿಗೆ ಪ್ರತಿಸುಂಕಕ್ಕೆ 90 ದಿನಗಳ ಬ್ರೇಕ್ ನೀಡಲಾಗಿದೆ. ಈ ಪಟ್ಟಿಯಲ್ಲಿ ಭಾರತವೂ ಇರಬಹುದು ಎನ್ನಲಾಗಿದೆ. ಭಾರತಕ್ಕೆ ಈಗಾಗಲೇ 26% ಪ್ರತಿಸುಂಕ ವಿಧಿಸಲಾಗಿದೆ. ಆದರೆ ಈಗ ಬ್ರೇಕ್ ನೀಡಿರುವ ರಾಷ್ಟದ ಪಟ್ಟಿಯಲ್ಲಿ ಚೀನಾ ಇಲ್ಲ.

ಬದಲಾಗಿ ಚೀನಾಗೆ 104% ನಿಂದ 125% ಸುಂಕ ಏರಿಕೆ ಮಾಡಿ ಹೊಡೆತ ನೀಡಲಾಗಿದೆ. ಚೀನಾ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಬೆಲೆ ಕೊಡಲ್ಲ. ಅದಕ್ಕೇ ಚೀನಾಕ್ಕೆ ಮಾತ್ರ ಪ್ರತಿಸುಂಕವನ್ನು 125% ಕ್ಕೆ ಏರಿಕೆ ಮಾಡಲಾಗಿದೆ ಎಂದಿದ್ದಾರೆ. ಇದಾದ ಬಳಿಕವಾದರೂ ಅಮೆರಿಕಾ ಸೇರಿದಂತೆ ಇತರೆ ರಾಷ್ಟ್ರಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯ ಎಂದು ಚೀನಾ ಅರ್ಥ ಮಾಡಿಕೊಳ್ಳಬಹುದು ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ದಕ್ಷಿಣ ಕನ್ನಡದವರಿಗೆ ಎಚ್ಚರಿಕೆ, ಇಂದಿನ ಹವಾಮಾನ ತಪ್ಪದೇ ಗಮನಿಸಿ