Select Your Language

Notifications

webdunia
webdunia
webdunia
webdunia

ಟ್ರಂಪ್‌ ತೆರಿಗೆ ಸಮರದಿಂದ ಷೇರು ಮಾರುಕಟ್ಟೆಯಲ್ಲಿ ಮಹಾಕಂಪನ: ನೀರಿನಂತೆ ಕರಗಿದ ₹20 ಲಕ್ಷ ಕೋಟಿ

Stock market crash, US President Donald Trump, Tata Consultancy Services

Sampriya

ಮುಂಬೈ , ಸೋಮವಾರ, 7 ಏಪ್ರಿಲ್ 2025 (14:19 IST)
Photo Courtesy X
ಮುಂಬೈ:  ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ತೆರಿಗೆ ಸಮರಕ್ಕೆ ಷೇರು ಮಾರುಕಟ್ಟೆಯಲ್ಲಿ ಮಹಾಕಂಪನ ಉಂಟಾಗಿದೆ. ಇಂದು ಒಂದೇ ದಿನ ಹೂಡಿಕೆದಾರರ  20.16 ಲಕ್ಷ  ಕೋಟಿ ಕರಗಿಹೋಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೆರಿಗೆ ನೀತಿಯಿಂದಾಗಿ ಉದ್ಭವಿಸಿದ ವ್ಯಾಪಾರ ಸಮರವು ತೀವ್ರಗೊಂಡಿರುವಂತೆಯೇ, ಜಾಗತಿಕ ಮಾರುಕಟ್ಟೆಗಳ ಸಂವೇದನೆಗಳಿಗೆ ಅನುಗುಣವಾಗಿ ಭಾರತೀಯ ಮಾರುಕಟ್ಟೆಯೂ ತೀವ್ರ ಹೊಡೆತ ಅನುಭವಿಸಿತು.

ಸೆನ್ಸೆಕ್ಸ್‌ ಆರಂಭದಲ್ಲಿ 4 ಸಾವಿರ ಅಂಕ ಪತನಗೊಂಡು ನಂತರ ಚೇತರಿಕೆ ಕಂಡಿತ್ತು. ಬೆಳಗ್ಗೆ 11 ಗಂಟೆಯ ವೇಳೆಗೆ 2,900 ಅಂಕ ಚೇತರಿಕೆಯಾಗಿ 72,423.48 ರಲ್ಲಿ ವ್ಯವಹಾರ ನಡೆಸುತ್ತಿತ್ತು. ನಿಫ್ಟಿ 900 ಅಂಕ ಇಳಿಕೆಯಾಗಿ 21,960.80 ರಲ್ಲಿ ವ್ಯವಹಾರ ನಡೆಸುತ್ತಿದೆ. ರಿಯಾಲ್ಟಿ, ಐಟಿ, ಆಟೋ ಮತ್ತು ಲೋಹ ಮುಂತಾದ ಕ್ಷೇತ್ರಗಳ ಷೇರುಗಳು ಮೌಲ್ಯ ಇಳಿಕೆಯಾಗಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಹೂಡಿಕೆಯನ್ನು ಹಿಂದಕ್ಕೆ ಪಡೆದ ಕಾರಣ ಬಾಂಬೆ ಷೇರು ಮಾರುಕಟ್ಟೆ ಸಂವೇದಿ ಸೂಚಂಕ್ಯ ಸೆನ್ಸೆಕ್ಸ್‌ ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚಂಕ್ಯ ನಿಫ್ಟಿ  ಭಾರೀ ಇಳಿಕೆ ಕಂಡಿದೆ.

ಇಂದು ಬೆಳಿಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ಏಷ್ಯಾದ ಎಲ್ಲ ಮಾರುಕಟ್ಟೆಗಳಲ್ಲಿ ಭಾರೀ ಇಳಿಕೆಯಾಗಿತ್ತು. ಗಿಫ್ಟ್‌ ನಿಫ್ಟಿಯೂ ಅಂಕ ಇಳಿಕೆಯಾಗುತ್ತಿದ್ದಂತೆ ಭಾರತದಲ್ಲೂ ಪರಿಣಾಮ ಬೀಳುವುದು ಖಚಿತವಾಗಿತ್ತು. ಬೆಳಗ್ಗೆಯವರೆಗೆ 20 ಲಕ್ಷ ಕೋಟಿ ನಷ್ಟ ಸಂಭವಿಸಿದ್ದು  ನಿಫ್ಟಿ ಮತ್ತು ಸೆನ್ಸೆಕ್ಸ್‌ ಮತ್ತಷ್ಟು ಕುಸಿದರೆ  ನಷ್ಟದ ಪ್ರಮಾಣ ಮತ್ತಷ್ಟು ಏರಿಕೆಯಾಗಲಿದೆ.

ಟಾಟಾ ಸ್ಟೀಲ್, ಟಾಟಾ ಮೋಟರ್ಸ್ ಶೇ.10ರಷ್ಟು ಕುಸಿತ ಕಂಡರೆ, ಲಾರ್ಸನ್ ಆ್ಯಂಡ್ ಟೂಬ್ರೋ, ಹೆಚ್‌ಸಿಎಲ್ ಟೆಕ್ನಾಲಜೀಸ್, ಅದಾನಿ ಪೋರ್ಟ್ಸ್, ಟೆಕ್ ಮಹೀಂದ್ರಾ, ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ರಿಲಯನ್ಸ್ ಇಂಡಸ್ಟ್ರೀಸ್, ಮಹೀಂದ್ರಾ ಆ್ಯಂಡ್ ಮಹೀಂದ್ರಾ ಮುಂತಾದವು ಭಾರಿ ನಷ್ಟ ಅನುಭವಿಸಿದವು.





Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಸರ್ಕಾರದ ದೋಖಾ ಜನರಿಗೆ ತಿಳಿಸಲು ಜನಾಕ್ರೋಶ ಯಾತ್ರೆ: ವಿಜಯೇಂದ್ರ