Select Your Language

Notifications

webdunia
webdunia
webdunia
webdunia

ಉತ್ತರ ಕೊರಿಯಾಗೆ ಅಮೆರಿಕ ಎಚ್ಚರಿಕೆ?

ಉತ್ತರ ಕೊರಿಯಾಗೆ ಅಮೆರಿಕ ಎಚ್ಚರಿಕೆ?
ವಾಷಿಂಗ್ಟನ್ , ಬುಧವಾರ, 1 ಜೂನ್ 2022 (13:43 IST)
ವಾಷಿಂಗ್ಟನ್ : ಉತ್ತರ ಕೊರಿಯಾ ಪರಮಾಣು ಅಸ್ತ್ರ ಪ್ರಯೋಗಿಸಿದ್ದಲ್ಲಿ, ವಿಶ್ವಸಂಸ್ಥೆಗೆ ನಿರ್ಬಂಧವನ್ನು ಕಠಿಣಗೊಳಿಸುವಂತೆ ಒತ್ತಾಯಿಸುತ್ತೇವೆ ಎಂದು ಅಮೆರಿಕ ಎಚ್ಚರಿಸಿದೆ.

ಉತ್ತರ ಕೊರಿಯಾ ವಿನಾಶಕಾರಿ ಪರಮಾಣು ಅಸ್ತ್ರ ಪರೀಕ್ಷೆಗೆ ಮುಂದಾದಲ್ಲಿ, ಅಮೆರಿಕದ ಭದ್ರತ ಮಂಡಳಿ ಹೊಸ ಪ್ರಯತ್ನ ಮಾಡುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಮೆರಿಕ ರಾಯಭಾರಿ ಲಿಂಡಾ ಥಾಮಸ್-ಗ್ರೀನ್ಫೀಲ್ಡ್, ಖಂಡಿತವಾಗಿಯೂ ಮಾಡುತ್ತೇವೆ ಎಂದಿದ್ದಾರೆ. 

ಮೊದಲನೆಯದಾಗಿ ನಾವು ಈಗಾಗಲೇ ಜಾರಿಗೊಳಿಸಲು ಅಧಿಕಾರ ಹೊಂದಿರುವ ನಿರ್ಬಂಧಗಳನ್ನು ಜಾರಿಗೊಳಿಸಬೇಕಾಗಿದೆ. ಈ ಕೊನೆಯ ನಿರ್ಣಯದಲ್ಲಿ ನಾವು ಪ್ರಯತ್ನಿಸಿದಂತೆ ಹೆಚ್ಚುವರಿ ನಿರ್ಬಂಧಗಳನ್ನು ಜಾರಿಗೊಳಿಸುವಂತೆ ವಿಶ್ವಸಂಸ್ಥೆಯನ್ನು ಒತ್ತಾಯಿಸುತ್ತೇವೆ ಎಂದಿದ್ದಾರೆ. 

ಉತ್ತರ ಕೊರಿಯಾ 2017ರಿಂದಲೇ ತನ್ನ ಪ್ರಮಾಣು ಅಸ್ತ್ರ ಪರೀಕ್ಷೆ ನಡೆಸಲು ಸಿದ್ಧತೆ ನಡೆಸುತ್ತಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ತಿಳಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಗರಬತ್ತಿ ಮಾರಾಟದಲ್ಲಿ ಭಾರೀ ಕುಸಿತ?