Select Your Language

Notifications

webdunia
webdunia
webdunia
webdunia

ಅಗರಬತ್ತಿ ಮಾರಾಟದಲ್ಲಿ ಭಾರೀ ಕುಸಿತ?

ಅಗರಬತ್ತಿ ಮಾರಾಟದಲ್ಲಿ ಭಾರೀ ಕುಸಿತ?
ನವದೆಹಲಿ , ಬುಧವಾರ, 1 ಜೂನ್ 2022 (13:16 IST)
ನವದೆಹಲಿ :  ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಕಷ್ಟಗಳು ಬಂದಾಗ ಮಾತ್ರ ದೇವರನ್ನು ನೆನೆಯುವವರೇ ಜಾಸ್ತಿ.
 
ಕೋವಿಡ್ ಸಂಕಷ್ಟ ದೇಶಕ್ಕೆ ಯುದ್ಧ ಕಾಲಕ್ಕಿಂತಲೂ ಸಂದಿಗ್ಧ ಪರಿಸ್ಥಿತಿಯನ್ನು ತಂದೊಡ್ಡಿತ್ತು. ಭಾರತ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳು ಕೊರೋನಾ ಮಹಾಮಾರಿಯಿಂದ ತತ್ತರಿಸಿ ಹೋಗಿದ್ದವು.

ಇಂಥಹ ಕಷ್ಟದ ಕಾಲದಲ್ಲಿ ಜನರು ದೇವರೆ ಮೊರೆ ಹೋದಂತೆ ತೋರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ  ಕೊರೋನಾ ಅವಧಿಯಲ್ಲಿ, ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾಗ, ದೇಶದಲ್ಲಿ ಅಗರಬತ್ತಿಗಳ ಮಾರಾಟ ಹೆಚ್ಚಾಗಿದೆ.

ಕೊರೋನಾ ಕಾಲದಲ್ಲಿ ಅಗರಬತ್ತಿ ಉದ್ಯಮದ ಮಾರಾಟದಲ್ಲಿ 30 ಪ್ರತಿಶತದಷ್ಟು ಜಿಗಿತ ಕಂಡುಬಂದಿತ್ತು ಎಂದು ತಜ್ಞರು ಹೇಳಿದ್ದಾರೆ.

ಆದರೆ ಕೊರೊನಾ ಸೋಂಕು ತಗ್ಗುತ್ತಿದ್ದಂತೆಯೇ ಜನರು ಕಚೇರಿಗೆ ತೆರಳಲಾರಂಭಿಸಿದ್ದು ಇದರೊಂದಿಗೆ ಅಗರಬತ್ತಿಗಳ ಮಾರಾಟದ ಬೆಳವಣಿಗೆಯೂ ಒಂದೇ ಅಂಕೆಗೆ ಇಳಿದಿದೆ. ಹೆಚ್ಚಿನ ಅಗರಬತ್ತಿಗಳ ವ್ಯಾಪಾರ ಅಸಂಘಟಿತ ವಲಯದಲ್ಲಿದೆ ಎಂಬುದು ಉಲ್ಲೇಖನೀಯ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯ ಅಶ್ಲೀಲ ವಿಡಿಯೋ ಮಾವನಿಗೆ ಕಳಿಸಿದ ! ಮುಂದೇನಾಯ್ತು?