Select Your Language

Notifications

webdunia
webdunia
webdunia
webdunia

ವಿಮಾನ ಸಂಸ್ಥೆ ಮಾರಾಟ, ನೋಟು ಮುದ್ರಣ: ಲಂಕಾ ನೂತನ ಪ್ರಧಾನಿ ಘೋಷಣೆ

Sri Lanka Airline Salaries ಶ್ರೀಲಂಕಾ ವಿಮಾನ ಸಂಸ್ಥೆ ವೇತನ
bengaluru , ಮಂಗಳವಾರ, 17 ಮೇ 2022 (14:33 IST)
ದಿವಾಳಿ ಸ್ಥಿತಿ ತಲುಪಿರುವ ಶ್ರೀಲಂಕಾದ ಆರ್ಥಿಕ ಸ್ಥಿತಿ ಸುಧಾರಿಸಲು ನೂತನ ಸರಕಾರ ಸರಕಾರಿ ಒಡೆತನದ ವಿಮಾನ ಸಂಸ್ಥೆ ಮಾರಾಟ ಮಾಡುವುದು ಹಾಗೂ ನೋಟು ಮುದ್ರಿಸಲು ತೀರ್ಮಾನಿಸಿದೆ.
ಶ್ರೀಲಂಕಾದ ವಿಮಾನ ಸಂಸ್ಥೆಯನ್ನು ಖಾಸಗೀಕರಣ ಮಾಡಲಾಗುವುದು ಎಂದು ನೂತನ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಸೋಮವಾರ ಟೀವಿಯಲ್ಲಿ ನೇರಪ್ರಸಾರ ಭಾಷಣದಲ್ಲಿ ತಿಳಿಸಿದರು.
ವಿಮಾನಯಾನ ಸಂಸ್ಥೆ ಮಾರ್ಚ್‌ 2021ರ ಆರ್ಥಿಕ ವರ್ಷದಲ್ಲಿ 45 ದಶಲಕ್ಷ ಡಾಲರ್‌ ನಷ್ಟ ಅನುಭವಿಸಿದೆ. ವಿಮಾನಯಾನ ಸಂಸ್ಥೆ ನಷ್ಟ ಕೂಡ ಆರ್ಥಿಕ ಹೊರೆಯಾಗಿದ್ದು, ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ ಎಂದು ಅವರು ವಿವರಿಸಿದ್ದಾರೆ.
ಶೀಘ್ರದಲ್ಲೇ ನೋಟುಗಳ ಮುದ್ರಣ ಆರಂಭಿಸಲಾಗುವುದು. ಈ ಮೂಲಕ ಜನರು ಆಹಾರ ಸಾಮಾಗ್ರಿ ಖರೀದಿಗೆ ಬೇಕಾದ ವೇತನ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಡಿಎ ಅಧ್ಯಕ್ಷರ ಕಾರ್ಯದರ್ಶಿಗೆ 3 ಲಕ್ಷ ಸಂಬಳ ಬೇಕಾ? ಎಎಪಿ ಪ್ರಶ್ನೆ