Select Your Language

Notifications

webdunia
webdunia
webdunia
webdunia

ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಹಣ ವಂಚಿಸಿದ ಅರ್ಚಕ!

ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಹಣ ವಂಚಿಸಿದ ಅರ್ಚಕ!
ಚಂಡೀಗಢ , ಮಂಗಳವಾರ, 17 ಮೇ 2022 (09:14 IST)
ಚಂಡೀಗಢ : ದೇವಸ್ಥಾನದ ಅರ್ಚಕನೊಬ್ಬ ಮಹಿಳೆ ಮೇಲೆ ಅತ್ಯಾಚಾರಗೈದು ಒಂದು ಲಕ್ಷ 15 ಸಾವಿರ ರೂ. ಹಾಗೂ ಚಿನ್ನಾಭರಣ ವಂಚಿಸಿರುವ ಘಟನೆ ಹರಿಯಾಣದ ಹಿಸಾರ್ನಲ್ಲಿ ನಡೆದಿದೆ.

ಅರ್ಚಕ ನರೇಶ್ ಅತ್ಯಾಚಾರಗೈದ ಆರೋಪಿ. ಆತ ಸಂತ್ರಸ್ತೆಯ ನೆರೆಹೊರೆಯಲ್ಲಿ ವಾಸವಾಗಿದ್ದು, ಅಲ್ಲಿಯೇ ಸಮೀಪದಲ್ಲೇ ಮನೆಯೊಂದನ್ನು ಖರೀದಿಸಿದ್ದನು. ಈ ವೇಳೆ ಸಂತ್ರಸ್ತೆಯ ಮನೆಗೆ ಆಗಾಗ ಭೇಟಿ ನೀಡಲು ಆರಂಭಿಸಿದ್ದನು. 

ಆರೋಪಿಯು ಒಂದು ದಿನ ಮಹಿಳೆ ಮತ್ತು ಅವರ ಅತ್ತೆಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದನು. ಈ ವೇಳೆ ನಿಮ್ಮ ಕುಟುಂಬ ಸಂಕಷ್ಟದಲ್ಲಿದೆ ಪೂಜೆಯಿಂದ ನೋವು ನಿವಾರಣೆಯಾಗುತ್ತದೆ ಎಂದಿದ್ದನು. ಆ ನಂತರ ಮಹಿಳೆಯ ಮನೆಗೆ ಅವನ ಭೇಟಿ ಹೆಚ್ಚಾಯಿತು. ಒಂದು ದಿನ ಆತ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿ ಅಶ್ಲೀಲ ವೀಡಿಯೋ ಕೂಡ ಮಾಡಿದ್ದನು.

ಮಹಿಳೆಯ ಪತಿ ಸಿಆರ್ಪಿಎಫ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಬೇರೆ ರಾಜ್ಯದಲ್ಲಿ ನಿಯೋಜಿಸಲಾಗಿದೆ. ಇದರ ಲಾಭ ಪಡೆದ ಅರ್ಚಕ ಅವರ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಈ ಕುರಿತು ಆರೋಪಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಈ ಪ್ರಕರಣದಲ್ಲಿ ಅತ್ಯಾಚಾರ ಸೇರಿದಂತೆ ಇತರೆ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ವಾಮಾಚಾರದ ಭಯವನ್ನೂ ತೋರಿಸಿ ರೂಪಾಯಿ ಸುಲಿಗೆ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಟೆಸ್ಟ್ ಡ್ರೈವ್ ಗೆಂದು ಪಡೆದ ಕಾರಿನೊಂದಿಗೆ ಉದ್ಯಮಿ ಪರಾರಿ!