Select Your Language

Notifications

webdunia
webdunia
webdunia
webdunia

ಟೆಸ್ಟ್ ಡ್ರೈವ್ ಗೆಂದು ಪಡೆದ ಕಾರಿನೊಂದಿಗೆ ಉದ್ಯಮಿ ಪರಾರಿ!

ಟೆಸ್ಟ್ ಡ್ರೈವ್ ಗೆಂದು ಪಡೆದ ಕಾರಿನೊಂದಿಗೆ ಉದ್ಯಮಿ ಪರಾರಿ!
ಬೆಂಗಳೂರು , ಮಂಗಳವಾರ, 17 ಮೇ 2022 (09:00 IST)
ಬೆಂಗಳೂರು: ಟೆಸ್ಟ್ ಡ್ರೈವ್ ಮಾಡಲು ಕಾರು ಪಡೆದು ಉದ್ಯಮಿ ಎಂದು ಹೇಳಿಕೊಂಡು ಬಂದ ವ್ಯಕ್ತಿ ಕಾರಿನೊಂದಿಗೆ ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಇದೀಗ ಘಟನೆ ನಡೆದ 100 ದಿನಗಳ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ.

ಜನವರಿ 30 ರಂದು ಈ ಘಟನೆ ನಡೆದಿತ್ತು. ಕಾರಿನ ಮಾಲಿಕ ಒಎಲ್ ಎಕ್ಸ್ ನಲ್ಲಿ ಕಾರು ಮಾರಾಟಕ್ಕಿಟ್ಟಿದ್ದ. ಈತನ ಬಳಿ ಕಾರು ಕೊಳ್ಳಲು ಬಂದ ಆರೋಪಿ ಎಸ್ ಯುವಿ ಕಾರನ್ನು ಟೆಸ್ಟ್ ಡ್ರೈವ್ ಮಾಡಲು ಪಡೆದುಕೊಂಡಿದ್ದ.

ಆದರೆ ಟೆಸ್ಟ್ ಡ್ರೈವ್ ಮಾಡಲು ಬಂದವನು ಕಾರಿನೊಂದಿಗೆ ಪರಾರಿಯಾಗಿದ್ದಾನೆ. ಈ ಸಂಬಂಧ ಮಾಲಿಕ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಒಎಲ್ ಎಕ್ಸ್ ನಲ್ಲಿ ಆರೋಪಿಯ ಐಪಿ ಅಡ್ರೆಸ್ ತಡಕಾಡಿ ಕೊನೆಗೂ ಸೆರೆಹಿಡಿದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮ್ಮನ ಮೃತದೇಹದ ಜೊತೆಗೆ ಮೂರು ದಿನ ಕಳೆದ ಮಗ!