Publish Date: Mon, 16 May 2022 (09:10 IST)
Updated Date: Mon, 16 May 2022 (09:11 IST)
ರಾಯಚೂರು: ಮಹಿಳೆಯೊಬ್ಬಳ ಜೊತೆ ಇಬ್ಬರು ಗೆಳೆಯರು ಅಕ್ರಮ ಸಂಬಂಧ ಹೊಂದಿದ್ದು ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ.
ಒಬ್ಬಳೇ ಮಹಿಳೆ ಜೊತೆ ಇಬ್ಬರು ಗೆಳೆಯರಿಗೆ ಅಕ್ರಮ ಸಂಬಂಧವಿತ್ತು. ಇದೇ ವಿಚಾರಕ್ಕೆ ಸ್ನೇಹಿತ ಬಸವರಾಜ್ ನನ್ನು ಜಗದೀಶ್ ಎಂಬಾತ ಕೊಲೆ ಮಾಡಿದ್ದ.
ಬಳಿಕ ಮೃತದೇಹವನ್ನು ಸುಟ್ಟು ಹಾಕಿದ್ದ. ಒಂದು ದಿನದ ಬಳಿಕ ಪೊಲೀಸರಿಗೆ ಅರ್ದಂಬರ್ಧ ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದಾಗ ನಿಜಾಂಶ ಬಯಲಿಗೆ ಬಂದಿತ್ತು. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.