Select Your Language

Notifications

webdunia
webdunia
webdunia
webdunia

ವೈವಾಹಿಕ ಅಂಕಣದಲ್ಲಿ 100 ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದ ವ್ಯಕ್ತಿ ಅರೆಸ್ಟ್

ನವದೆಹಲಿ , ಶನಿವಾರ, 14 ಮೇ 2022 (08:50 IST)
ನವದೆಹಲಿ: ವೈವಾಹಿಕ ಅಂಕಣದಲ್ಲಿ ನಕಲಿ ಖಾತೆ ಸೃಷ್ಟಿಸಿದ್ದ ವ್ಯಕ್ತಿ 100 ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದ್ದಾನೆ. ಈತನನ್ನು ಇದೀಗ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಅಸಲಿಗೆ ವಿವಾಹಿತನಾಗಿದ್ದ ಈತ ತಾನೊಬ್ಬ ಶ್ರೀಮಂತ ಅವಿವಾಹಿತ ಉದ್ಯಮಿ ಎಂದು ಯುವತಿಯರಿಗೆ ವಂಚಿಸುತ್ತಿದ್ದ. ಅವರನ್ನು ಪರಿಚಯ ಮಾಡಿಕೊಂಡ ಬಳಿಕ ತನ್ನ ಬ್ಯುಸಿನೆಸ್ ಡೀಲ್ ಗೆ ಹಣ ಸಹಾಯ ಬೇಕೆಂದು ಹಣ ಪಡೆದುಕೊಳ್ಳುತ್ತಿದ್ದ. ಬಳಿಕ ವಂಚಿಸುತ್ತಿದ್ದ.

ಈ ಬಗ್ಗೆ ಆತನಿಂದ ವಂಚನೆಗೊಳಗಾದ ಯುವತಿಯೊಬ್ಬಳು ದೂರು ನೀಡಿದ್ದಳು. ಅದರಂತೆ ಸೈಬರ್ ಕ್ರೈಂ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಜೈಲರ್ ಆಗಿರೋ ಜೈಲಲ್ಲೇ ಆರೋಪಿಗೆ ಕಂಬಿ ಎಣಿಸೋ ಕೆಲಸ