Publish Date: Thu, 12 May 2022 (11:40 IST)
Updated Date: Thu, 12 May 2022 (10:11 IST)
ಭೋಪಾಲ್: ಕೊರೋನಾ ಸಮಯದಲ್ಲಿ ಕೊವಿಡ್ ವಾರಿಯರ್ ಆಗಿ ಜನರಿಗೆ ಸಹಾಯ ಮಾಡಿ ಮೆಚ್ಚುಗೆಗೆ ಪಾತ್ರವಾಗಿದ್ದ ಆಟೋ ಚಾಲಕನೊಬ್ಬ ಈಗ ಅತ್ಯಾಚಾರ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದಾನೆ.
ತನ್ನ ಬಾಡಿಗೆದಾರ ಮಹಿಳೆ ಮೇಲೆ ಅತ್ಯಾಚಾರ ಮಾಡಿದ ಆರೋಪದಲ್ಲಿ ಈತನನ್ನು ಬಂಧಿಸಲಾಗಿದೆ. ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು.
ಕೊವಿಡ್ ಸಂದರ್ಭದಲ್ಲಿ ತನ್ನ ಆಟೋ ರಿಕ್ಷಾವನ್ನೇ ಆಂಬ್ಯುಲೆನ್ಸ್ ಮಾಡಿ ಈತ ಜನರಿಗೆ ನೆರವಾಗಿದ್ದ. ಆದರೆ ಈಗ ಬಾಡಿಗೆ ಮನೆಗೆ ಯಾರೂ ಇಲ್ಲದ ವೇಳೆ ನುಗ್ಗಿ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿದ್ದಾನೆ. ಕೃತ್ಯದ ಬಳಿಕ ಈ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.