Publish Date: Wed, 11 May 2022 (09:30 IST)
Updated Date: Wed, 11 May 2022 (09:41 IST)
ಮೀರತ್: ಕ್ಷುಲ್ಲುಕ ಕಾರಣಕ್ಕೆ ಪ್ರೇಯಸಿ ಜೊತೆ ಕಿತ್ತಾಡಿದ ವ್ಯಕ್ತಿ ಬಳಿಕ ಆಕೆಯನ್ನು ಕೇಬಲ್ ವಯರ್ ಬಳಸಿ ಕೊಲೆ ಮಾಡಿದ್ದಾನೆ.
ಉತ್ತರ ಪ್ರದೇಶದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಆರೋಪಿಗೆ ಈಗಾಗಲೇ ಮದುವೆಯಾಗಿದ್ದರೂ ಕಳೆದ ಮೂರು ವರ್ಷಗಳಿಂದ ಪ್ರೇಯಸಿ ಜೊತೆ ನೆಲೆಸಿದ್ದ.
ಇದೀಗ ಇಬ್ಬರ ನಡುವೆ ಕ್ಷುಲ್ಲುಕ ವಿಚಾರಕ್ಕೆ ಜಗಳವಾಗಿದ್ದು, ಇದೇ ಸಿಟ್ಟಿನಲ್ಲಿ ಮಹಿಳೆಯನ್ನು ಆರೋಪಿ ಕೊಲೆ ಮಾಡಿದ್ದಾನೆ. ಬಳಿಕ ಇಡೀ ರಾತ್ರಿ ಮೃತದೇಹದೊಂದಿಗೆ ಕುಳಿತಿದ್ದಾನೆ. ನೆರೆಹೊರೆಯವರಿಗೆ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.