Publish Date: Wed, 11 May 2022 (09:20 IST)
Updated Date: Wed, 11 May 2022 (09:34 IST)
ಜೈಪುರ: ಬೆಳ್ಳಿ ಗೆಜ್ಜೆ ಕದಿಯಲು ಖತರ್ನಾಕ್ ಮಹಿಳೆಯೊಬ್ಬಳು ನಾಲ್ಕು ವರ್ಷದ ಮಗುವನ್ನು ಕೊಂದು ಹೂತು ಹಾಕಿದ ಘಟನೆ ರಾಜಸ್ಥಾನ್ ನಲ್ಲಿ ನಡೆದಿದೆ.
ಚಾಕಲೇಟ್ ಆಮಿಷ ತೋರಿಸಿ ಮನೆಗೆ ಮಗುವನ್ನು ಕರೆಸಿಕೊಂಡ ಮಹಿಳೆ ಬಳಿಕ ಮಗುವಿನ ತಲೆಗೆ ಹೊಡೆದು ಕೊಲೆ ಮಾಡಿದ್ದಾಳೆ. ಬಳಿಕ ಗೆಜ್ಜೆಯನ್ನು ಕಿತ್ತುಕೊಂಡಿದ್ದಾಳೆ. ಮೃತದೇಹವನ್ನು ಮನೆಯ ಹಿತ್ತಲಿನಲ್ಲೇ ಹೂತು ಹಾಕಿದ್ದಾಳೆ.
ಮಗು ಕಾಣೆಯಾಗಿರುವ ಬಗ್ಗೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಈ ವೇಳೆ ನೆರೆಮನೆಯ ಮಹಿಳೆಯ ಹಿತ್ತಲಿನಲ್ಲಿ ಮೃತದೇಹ ಪತ್ತೆ ಮಾಡಲಾಗಿದೆ.