Publish Date: Tue, 10 May 2022 (10:00 IST)
Updated Date: Tue, 10 May 2022 (10:02 IST)
ನವದೆಹಲಿ: ಕ್ಷುಲ್ಲುಕ ವಿಚಾರಕ್ಕೆ ಯುವಕನನ್ನು ಬೆಲ್ಟ್ ನಲ್ಲಿ ಮನಬಂದಂತೆ ಥಳಿಸಿ ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
20 ಜನ ಯುವಕರ ಗುಂಪು ಈ ಕೃತ್ಯವೆಸಗಿದೆ. ಈ ಪೈಕಿ ಇಬ್ಬರು ಅಪ್ರಾಪ್ತರು ಸೇರಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ.
ಹೋಳಿ ಹಬ್ಬದ ಆಚರಣೆ ವೇಳೆ ಯುವಕರ ನಡುವೆ ಮನಸ್ತಾಪವಾಗಿತ್ತು. ಇದೇ ವಿಚಾರವಾಗಿ ಯುವಕನನ್ನು ಥಳಿಸಿ ಕೊಲೆ ಮಾಡಲಾಗಿದೆ. ತೀವ್ರ ಗಾಯಗೊಂಡಿದ್ದ ಯುವಕನನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.