Publish Date: Sun, 08 May 2022 (09:00 IST)
Updated Date: Sun, 08 May 2022 (09:06 IST)
ಇಸ್ಲಾಮಾಬಾದ್: ಡ್ಯಾನ್ಸ್ ಮತ್ತು ಮಾಡೆಲಿಂಗ್ ಮಾಡುತ್ತಿದ್ದ ತಂಗಿಯನ್ನು ಅಣ್ಣನೇ ಕೊಲೆ ಮಾಡಿದ್ದಾನೆ. ಪಾಕಿಸ್ತಾನದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.
ಇದೂ ಒಂದು ರೀತಿಯಲ್ಲಿ ಮರ್ಯಾದೆ ಹತ್ಯೆ. ಕಟ್ಟಾ ಸಾಂಪ್ರದಾಯಿಕ ರಾಷ್ಟ್ರವಾಗಿರುವ ಪಾಕಿಸ್ತಾನದಲ್ಲಿ ಮಹಿಳೆಯರು ಮಾಡೆಲಿಂಗ್ ಮಾಡುವುದು, ಅಂಗ ಪ್ರದರ್ಶನ ಮಾಡುವುದಕ್ಕೆಲ್ಲಾ ನಿರ್ಬಂಧವಿದೆ.
ಹೀಗಾಗಿ ಮಾಡೆಲಿಂಗ್ ಮಾಡಲು ಹೊರಟಿದ್ದ 21 ವರ್ಷದ ಯುವತಿಯನ್ನು ಆಕೆಯ ಅಣ್ಣನೇ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಪಂಜಾಬ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ಇದೀಗ ಅಣ್ಣನ ವಿರುದ್ಧ ಪ್ರಕರಣ ದಾಖಲಾಗಿದೆ.