Publish Date: Sat, 07 May 2022 (07:49 IST)
Updated Date: Sat, 07 May 2022 (07:49 IST)
ಒಡಿಶ್ಶಾ: ತೆಲುಗಿನ ಸೂಪರ್ ಹಿಟ್ ಸಿನಿಮಾ ಪುಷ್ಪದ ಶ್ರೀವಲ್ಲಿ ಹಾಡಿನ ಸ್ಟೆಪ್ ಭಾರೀ ವೈರಲ್ ಆಗಿತ್ತು.
ಸೆಲೆಬ್ರಿಟಿಗಳು, ಸಾಮಾನ್ಯರು ಈ ಹಾಡಿನ ಸಿಗ್ನೇಚರ್ ಸ್ಟೆಪ್ ಹಾಕಿದ್ದರು. ಇದೀಗ ಇದೇ ರೀತಿ ಶ್ರೀವಲ್ಲಿ ಹಾಡಿಗೆ ನೃತ್ಯ ಮಾಡಲು ಹೋಗಿ ಒಡಿಶ‍್ಶಾದ ಶಾಲಾ ಶಿಕ್ಷಕಿಯೊಬ್ಬರು ಅಮಾನಾತಾಗಿದ್ದಾರೆ.
ಸ್ಮಾರ್ಟ್ ಬೋರ್ಡ್ ಕ್ಲಾಸ್ ವೇಳೆ ವಿದ್ಯಾರ್ಥಿಗಳೊಂದಿಗೆ ಶ್ರೀವಲ್ಲಿ ಹಾಡಿಗೆ ಶಿಕ್ಷಕಿ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.